Advertisement

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

12:30 AM Dec 14, 2024 | Team Udayavani |

ಬೆಳಗಾವಿ: ಸದನದಲ್ಲಿ ಜಾಸ್ತಿ ಸಮಯ ಕುಳಿತವರು, ಹೆಚ್ಚು ಬಾರಿ ಶಾಸಕರಾಗಿ ಗೆಲ್ಲುತ್ತಾರಂತೆ. ಹೀಗಾಗಿ ಶಾಸಕರಾದವರು ಸದನದಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಪಾಠ ಮಾಡಿದರು.

Advertisement

ಶುಕ್ರವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ವಿ. ಸುನಿಲ್‌ ಕುಮಾರ್‌ ವಿಷಯ ಪ್ರಸ್ತಾವಿಸಿ, ಮೊದಲ ಸಾಲಿನಲ್ಲಿ ಸಚಿವರೇ ಇಲ್ಲ. ನಾವು ನಿನ್ನೆ ರಾತ್ರಿ 10 ಗಂಟೆವರೆಗೆ ಕುಳಿತಿದ್ದೇವೆ. ಸಚಿವರು ಬರುವುದಿಲ್ಲ ಎಂದರೆ ಸದನವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಂತಿಲ್ಲ ಎಂದು ಆರೋಪಿಸಿದರು. ಮಧ್ಯಪ್ರವೇಶಿಸಿದ ಸ್ಪೀಕರ್‌, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಚಿವರಿದ್ದಾರಲ್ಲ ಎಂದರು. ಆಗ ವಿಪಕ್ಷ ಸದಸ್ಯರು, ಹಾಗಿದ್ದರೆ ಪ್ರಶ್ನೆ ಕೇಳುವವರಷ್ಟೇ ಇದ್ದರೆ ಸಾಕೇ ಎಂದು ಪ್ರಶ್ನಿಸಿದರು.

ಸದನಕ್ಕೆ ಬೇಗ ಬಂದವರ ಹೆಸರುಗಳನ್ನು ಪ್ರಕಟಿಸಿದ ಸ್ಪೀಕರ್‌, ಗುರುವಾರ ರಾತ್ರಿ ಕೊನೆಯವರೆಗೂ ಕುಳಿತಿದ್ದವರ ಹೆಸರನ್ನೂ ಓದಿದರು. ಶಾಸಕರಾದವರು ಸದನದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಬೇಕು. ಚರ್ಚೆಯಲ್ಲಿ ಪಾಲ್ಗೊಂಡು, ಬೇರೆಯವರ ಚರ್ಚೆಯನ್ನೂ ಕೇಳಿಸಿಕೊಳ್ಳಬೇಕು. ವೈದ್ಯಕೀಯ, ಕಾನೂನು, ಎಂಜಿನಿಯರಿಂಗ್‌ ಸೇರಿದಂತೆ ಎಲ್ಲದಕ್ಕೂ ಅಕಾಡೆಮಿಗಳಿವೆ. ರಾಜಕೀಯಕ್ಕೆ ಇಲ್ಲ. ಸದನವೇ ಅಕಾಡೆಮಿ. ಹೀಗಾಗಿ ಪ್ರಶ್ನೆ ಕೇಳಿದ ಅನಂತರವೂ ಕುಳಿತುಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next