Advertisement

China ಆರ್ಥಿಕವಾಗಿ ವಿಷಮ ಸ್ಥಿತಿಯಲ್ಲಿದೆ: ವಾಲ್‌ಸ್ಟ್ರೀಟ್‌ ಜರ್ನಲ್‌ ಲೇಖನ

07:55 PM Aug 21, 2023 | Team Udayavani |

ವಾಷಿಂಗ್ಟನ್‌: ವಿಶ್ವದ 2ನೇ ಬೃಹತ್‌ ಆರ್ಥಿಕತೆ ಎನಿಸಿಕೊಂಡಿರುವ ಚೀನಾ ಆರ್ಥಿಕವಾಗಿ ಕುಸಿದು ಹೋಗುತ್ತಿದೆಯಾ? ಹೌದು ಎನ್ನುತ್ತಿದೆ ವಾಲ್‌ಸ್ಟ್ರೀಟ್‌ ಜರ್ನಲ್‌ನ ಭಾನುವಾರದ ಲೇಖನ.

Advertisement

“40 ವರ್ಷಗಳವರೆಗೆ ಪ್ರಗತಿ’ ಎಂಬ ಮಾದರಿಯಿಟ್ಟುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದ ಚೀನಾ ಈಗ ಕುಸಿಯುತ್ತಿದೆ, ಅದರ ಕಳಪೆ ಸ್ಥಿತಿ ಅಂಕಿಸಂಖ್ಯೆಗಳನ್ನೂ ದಾಟಿ ಹೋಗಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

“ವಿತ್ತತಜ್ಞರು ಚೀನಾ ಅತ್ಯಂತ ನಿಧಾನಗತಿಯ ಪ್ರಗತಿಯ ಹಂತಕ್ಕೆ ಪ್ರವೇಶಿಸುತ್ತಿದೆ ಎಂದಿದ್ದಾರೆ.
ಅದರ ಜನಸಂಖ್ಯೆ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗೆ ಹೆಚ್ಚಾಗಿರುವ ಬಿಕ್ಕಟ್ಟಿನಿಂದಾಗಿ ಪರಿಸ್ಥಿತಿ ವಿಷಮಗೊಂಡಿದೆ.

ಇದು ಕೇವಲ ತಾತ್ಕಾಲಿಕ ಅವಧಿಯ ಆರ್ಥಿಕ ದುರ್ಬಲತೆಯಲ್ಲ , ದೀರ್ಘಾವಧಿಯ ದೌರ್ಬಲ್ಯದೆಡೆಗೆ ನುಗ್ಗುತ್ತಿದೆ. ಈಗ ಚೀನಾದ ಪ್ರಗತಿ ಮಾದರಿ ಹರಿದುಹೋಗಿದೆ’ ಎಂದು ಲೇಖನದಲ್ಲಿ ಹೇಳಲಾಗಿದೆ.

ಆರ್ಥಿಕ ಇತಿಹಾಸದಲ್ಲೇ ಅತ್ಯಂತ ನಾಟಕೀಯ ಪಥವೊಂದಕ್ಕೆ ಜಗತ್ತು ಹೊರಳಿಕೊಳ್ಳುತ್ತಿದೆ. ಅದಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ ಎಂಬ ಕೊಲಂಬಿಯ ವಿವಿ ಇತಿಹಾಸ ಪ್ರಾಧ್ಯಾಪಕ ಆ್ಯಡಂ ಟೂಜ್‌ ಹೇಳಿಕೆಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next