Advertisement

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

12:48 AM Jan 03, 2025 | Team Udayavani |

ಬೀಜಿಂಗ್‌: 2020ರಲ್ಲಿ ವಿಶ್ವವನ್ನು ಕಾಡಿದ್ದ ಕೋವಿಡ್‌-19 ಸಾಂಕ್ರಾಮಿಕದ ಕರಿನೆರಳಿನಿಂದ ಹೊರಬಂದು, ದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿರು ವಂತೆಯೇ ಚೀನದಲ್ಲಿ ಮತ್ತೊಂದು  ಸಾಂಕ್ರಾಮಿಕ ಹರಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ!

Advertisement

ಹೌದು, ಇದಕ್ಕೆ ಪುಷ್ಟಿ ನೀಡುವಂತೆ ಚೀನದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬು ತುಳುಕುತ್ತಿರುವ ವೀಡಿಯೋಗಳೂ ವೈರಲ್‌ ಆಗಿದೆ. ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಈ ವೀಡಿಯೋ ಪೋಸ್ಟ್‌ ಮಾಡಿ, “ಚೀನದಲ್ಲಿ ಹೊಸ ಸಾಂಕ್ರಾಮಿಕದಿಂದ ಆಸ್ಪತ್ರೆಗಳು, ಶವಾಗಾರಗಳು ತುಂಬಿ ತುಳುಕುತ್ತಿದ್ದು, ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ವಿಷಮ ಶೀತ, ಜ್ವರ, ಕೋವಿಡ್‌ಸೇರಿ ಹಲವು ವೈರಸ್‌ಗಳು ವೇಗವಾಗಿ ಹಬ್ಬುತ್ತಿವೆ’ ಎಂದು ಬರೆದಿದ್ದಾರೆ. ಆದರೆ, ಈ ಅಂಶಗಳಿಗೆ ಯಾವುದೇ ಆಧಾರ ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಾಗಲೀ, ಚೀನ ಆಡಳಿತವಾಗಲೀ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಹೊರಡಿಸಿಲ್ಲ. ಇನ್ನೊಂದೆಡೆ, ಕೊರೊನಾ ವೈರಸ್‌ನ ಮೂಲದ ಬಗ್ಗೆ ಅಧ್ಯಯನ ನಡೆಸಲು ಕಳೆದ 5 ವರ್ಷಗಳ ದತ್ತಾಂಶ ನೀಡುವಂತೆ ಚೀನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next