Advertisement

ಚೀನ ಹೊಸ ಕ್ಷಿಪಣಿ ಭಾರತಕ್ಕೆ ಅಪಾಯಕಾರಿ?

11:43 AM Jan 03, 2018 | Team Udayavani |

ಬೀಜಿಂಗ್‌: ಚೀನ ನೂತನ ಹೈಪರ್‌ಸಾನಿಕ್‌ ಖಂಡಾಂತರ ಕ್ಷಿಪಣಿಗಳನ್ನು ನಿರ್ಮಿಸಿದ್ದು, ಇವು ಅಮೆರಿಕದ ಶಸ್ತ್ರಾಸ್ತ್ರ ತಂತ್ರಜ್ಞಾನಕ್ಕೆ ಸವಾಲೊಡ್ಡುವುದು ಮಾತ್ರವಲ್ಲ, ಜಪಾನ್‌ ಹಾಗೂ ನೆರೆಯ ಭಾರತಕ್ಕೂ ಅಪಾಯಕಾರಿ ಅಸ್ತ್ರಗಳಾಗಿವೆ ಎಂದು ಚೀನದ “ಸೌತ್‌ ಚೀನ ಮಾರ್ನಿಂಗ್‌ ಪೋಸ್ಟ್’ ಅಭಿಪ್ರಾಯಪಟ್ಟಿದೆ. 

Advertisement

ಕಳೆದ ವರ್ಷಾಂತ್ಯದ ಹೊತ್ತಿಗೆ ಚೀನ ಸೇನೆ ಈ ಹೈಪರ್‌ ಸಾನಿಕ್‌ “ಡಿಎಫ್-17′ ಖಂಡಾಂತರ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದ್ದನ್ನು ಜಪಾನ್‌ನ “ದ ಡಿಪ್ಲೊಮ್ಯಾಟ್‌’ ನಿಯತಕಾಲಿಕೆ ವರದಿ ಮಾಡಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿರುವ “ಸೌತ್‌ ಚೀನ ಮಾರ್ನಿಂಗ್‌ ಪೋಸ್‌’r ಹೊಸ ಕ್ಷಿಪಣಿಗಳು ಅಪಾಯಕಾರಿ ಎಂದು ತಿಳಿಸಿದೆ. ಅಲ್ಲದೆ,  ಇವು ನವೀನ ಮಾದರಿಯದ್ದಾಗಿದ್ದು, ತಂತ್ರಜ್ಞಾನದಲ್ಲಿ ಅತ್ಯಾಧುನಿಕವಾಗಿವೆ. 

ಡಿಎಫ್-17 ಕ್ಷಿಪಣಿ ಯಶಸ್ವಿಯಾಗಿದ್ದರೂ ಇದರ ಬಳಕೆ 2020ರಿಂದ ಆಗಲಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ತಿಳಿಸಿದೆ ಎಂದು “ದ ಡಿಪ್ಲೊಮ್ಯಾಟ್‌’ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next