Advertisement

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

01:41 AM Jan 07, 2025 | Team Udayavani |

ಬೀಜಿಂಗ್‌: ಭಾರತದ ಗಡಿ ಸಮೀಪದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ವಿಶ್ವದ ಅತೀದೊಡ್ಡ ಅಣೆಕಟ್ಟು ನಿರ್ಮಿಸಲು ಯೋಜಿಸಿರುವ ಚೀನ, ಸೋಮವಾರ ತನ್ನ ನಿರ್ಧಾರವನ್ನು ಪುನರುಚ್ಚರಿಸಿದೆ. ಇದೇ ವೇಳೆ ಯೋಜನೆಯಿಂದ ಭಾರತಕ್ಕೆ ಸಮಸ್ಯೆಯಾಗುವುದಿಲ್ಲ, ವೈಜ್ಞಾನಿಕ ಪರಿಶೀಲನೆಯ ಖಾತರಿ ಬಳಿಕವೇ ಯೋಜನೆ ಮುಂದುವರಿಸಲಾಗುತ್ತಿದೆ ಎಂದೂ ಹೇಳಿದೆ. ನದಿ ಪಾತ್ರದ ರಾಷ್ಟ್ರಗಳಿಗೆ ತೊಂದರೆ ಆಗುವುದಿಲ್ಲ ಎಂಬುದನ್ನು ಚೀನ ಸಾಬೀತು ಪಡಿಸಬೇಕೆಂದು ಭಾರತ ಪಟ್ಟು ಹಿಡಿದಿರುವಂತೆಯೇ ಚೀನದ ಈ ಹೇಳಿಕೆ ಮಹತ್ವ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next