Advertisement

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

12:45 PM Jan 08, 2025 | Team Udayavani |

ನವದೆಹಲಿ: “ದೇಶದ ಜನಸಂಖ್ಯೆಯ 35% ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2047 ರ ವೇಳೆಗೆ ಈ ಈ ಸಂಖ್ಯೆಯು 50% ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ” ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ  ಮನೋಹರ್ ಲಾಲ್ ಖಟ್ಟರ್ ಬುಧವಾರ(ಜ8) ಹೇಳಿಕೆ ನೀಡಿದ್ದಾರೆ.

Advertisement

“ಬದಲಾವಣೆಗಾಗಿ ಸಾಮರ್ಥ್ಯ” ಕಾರ್ಯಕ್ರಮವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಡೆವಲಪ್ಮೆಂಟ್ (NIUA) ಪ್ರಾರಂಭಿಸುತ್ತಿದೆ. ಬೆಳೆಯುತ್ತಿರುವ ನಗರಗಳನ್ನು ಸುಂದರಗೊಳಿಸಲು ಮತ್ತು ಜೀವನಮಟ್ಟವನ್ನು ಉತ್ತಮಗೊಳಿಸಲು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.

”ಹಳೆಯ ನಗರಗಳ ಪುನರಾಭಿವೃದ್ಧಿ, ಅಸ್ತಿತ್ವದಲ್ಲಿರುವ ನಗರಗಳ ವಿಸ್ತರಣೆ ಮತ್ತು ಹೊಸ ನಗರಗಳ ಅಭಿವೃದ್ಧಿ ಪ್ರಾರಂಭಿಸಲಾಗಿದೆ ಇದರಿಂದ ನಾವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೇವೆ ” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next