Advertisement

‘ಚೀನ ಅತಿ ಭ್ರಷ್ಟಾಚಾರದಿಂದ ಸೋವಿಯತ್‌ ರೀತಿ ಕುಸಿಯಬಹುದು’

07:22 PM Nov 15, 2017 | Team Udayavani |

ಬೀಜಿಂಗ್‌ : ”ದೇಶದೊಳಗಿನ ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಮರವನ್ನು ಚೀನ ತೀವ್ರಗೊಳಿಸಬೇಕು, ಇಲ್ಲದಿದ್ದರೆ ಸದ್ಯೋಭವಿಷ್ಯದಲ್ಲಿ ಸೋವಿಯತ್‌ ರೀತಿಯ ವಿಘಟನೆಯ ಕುಸಿತವನ್ನು ಕಾಣುವ ಅಪಾಯವಿದೆ” ಎಂದು ದೇಶದ ಎರಡನೇ ಅತೀ ಹಿರಿಯ ಭ್ರಷ್ಟಾಚಾರ-ಬಯಲು ಖ್ಯಾತಿಯ ನಾಯಕರೋರ್ವರು ಬುಧವಾರ ಸಂಪಾದಕೀಯ ಬರೆದಿದ್ದಾರೆ.

Advertisement

ಶಿಸ್ತು ಪರಿವೀಕ್ಷಣ ಕೇಂದ್ರೀಯ ಆಯೋಗದ ಉಪ ಕಾರ್ಯದರ್ಶಿಯಾಗಿದ್ದ ಯಾಂಗ್‌ ಕ್ಸಿಯೋಡು ಅವರನ್ನು ಕಳೆದ ತಿಂಗಳಲ್ಲಿ ಆಳುವ ಕಮ್ಯುನಿಸ್ಟ್‌ ಪಕ್ಷದ 25 ಅತೀ ಪ್ರಬಲ ಪಾಲಿಬ್ಯೂರೋದ ಓರ್ವ ಸದಸ್ಯನಾಗಿ ತೇರ್ಗಡೆ ಮಾಡಲಾಗಿತ್ತು. ‘ಚೀನ ತನ್ನಲ್ಲಿನ ಭ್ರಷ್ಟಾಚಾರವನ್ನು ನಿಗ್ರಹಿಸುವಲ್ಲಿ ವಿಫ‌ಲವಾದರೆ ದೇಶದ ಕೆಂಬಣ್ಣವೇ ಮುಂದೆ ಬೇರೆ ಬಣ್ಣಕ್ಕೆ ತಿರುಗಬಹುದು’ ಎಂದು ಯಾಂಗ್‌ ಕ್ಸಿಯೋಡು ಅವರು ಸಂಪಾದಕೀಯದಲ್ಲಿ  ಎಚ್ಚರಿಕೆ ನೀಡಿದ್ದಾರೆ. 

ಹಿಂದಿನ ಆಡಳಿತೆಯ ವಿರುದ್ಧ ಅತ್ಯಂತ ಕಟು ಶಬ್ದಗಳಲ್ಲಿ ಟೀಕೆ ಮಾಡಿರುವ ಯಾಂಗ್‌ ಅವರು “ಹಿಂದಿನ ಆಡಳಿತೆಯ ಕಾಲದಲ್ಲಿ ಭ್ರಷ್ಟಾಚಾರವನ್ನು ಬೆಳೆಯಲು ಬಿಟ್ಟ ಕಾರಣ ಪಕ್ಷದ ನಾಯಕತ್ವವೇ ದುರ್ಬಲವಾಯಿತು; ವಿಚಕ್ಷಣೆಯಲ್ಲಿ ಅದು ಮಂದವಾಯಿತು ಮತ್ತು ಸಿದ್ಧಾಂತಗಳನ್ನು ಅಲಕ್ಷಿಸಿತು’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.

“ಹಿಂದಿನ ಆಡಳಿತೆ ಬೆಳೆಯಲು ಬಿಟ್ಟ ಭ್ರಷ್ಟಾಚಾರ ಇಂದು ಪರ್ವತ ಪ್ರಮಾಣಕ್ಕೆ ಏರಿದೆ. ಇದನ್ನು ನಿಗ್ರಹಿಸದೇ ಹೋದರೆ ಸದ್ಯೋಭವಿಷ್ಯದಲ್ಲೇ ಚೀನದ ಕೆಂಬಣ್ಣ ಬೇರೆ ಬಣ್ಣಕ್ಕೆ ತಿರುಗುವುದು ನಿಶ್ಚಿತ’ ಎಂದು ಯಾಂಗ್‌ ಹೇಳಿದ್ದಾರೆ. 

“ಚೀನದ ಜನರ ಮತ್ತು ಪಕ್ಷದ ಭವಿಷ್ಯ ಸೋವಿಯತ್‌ ಒಕ್ಕೂಟ ಮತ್ತು ಈಸ್ಟರ್ನ್ ಬ್ಲಾಕ್‌ ರೀತಿಯಲ್ಲೇ ಸಾಗಿ ಅಂತಿಮವಾಗಿ ಪತನವನ್ನು ಕಂಡೀತು” ಎಂದು ಯಾಂಗ್‌ ಹೇಳಿದ್ದಾರೆ. 

Advertisement

‘ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ಅವರಂತಹ ಅನೇಕ ಅಧಿಕಾರಿಗಳು ಪಕ್ಷವು ದೀರ್ಘ‌ಕಾಲ ಬೆಳೆಸಿಕೊಂಡು ಬಂದ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ; ಆದೆಂದರೆ ಜನರ ಮತ್ತು ಪಕ್ಷದ ಮೇಲಿನ ನಿಯಂತ್ರಣವನ್ನು ಮಿಂಚಿನ ಗತಿಯಲ್ಲಿ ಅಥವಾ ನಿಧಾನವಾಗಿ ಸಡಿಲಿಸುತ್ತಾ ಹೋದರೆ ದೇಶದಲ್ಲಿ ಕ್ಷೋಭೆ ತಾಂಡವವಾಡಿ ಅಂತಿಮವಾಗಿ ದೇಶ ಒಡೆದುಹೋದೀತು ಎಂಬುದಾಗಿದೆ.’ 

‘ಪಕ್ಷವು ತನ್ನ ಕೇಡರ್‌ಗಳಿಗೆ 1990ರ ದಶಕದ ಆದಿಯಲ್ಲಿ ಸೋವಿಯತ್‌ ಒಕ್ಕೂಟ ಏಕೆ ಕುಸಿದು ಹೋಳಾಗಿ ಹೋಯಿತು ಎಂಬುದನ್ನು ಅಧ್ಯಯನ ಮಾಡಲು ಸೂಚಿಸುತ್ತದೆ. ಆದರೆ ಚೀನ ತನ್ನಲ್ಲಿನ ಭಾರೀ ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಮರವನ್ನು ಮೇಲ್ಮಟ್ಟಕ್ಕೆ ಏರಿಸದೆ ಹೋದರೆ ಮುಂದೆ ದೇಶವು ಒಡೆದು ಹೋಳಾಗುವುದು ನಿಶ್ಚಿತ’ ಎಂದು ಯಾಂಗ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next