Advertisement

ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ

03:04 AM Jan 09, 2025 | Team Udayavani |

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ಆದಾಯ ಮೀರಿ ಆಸ್ತಿ ಹೊಂದಿದ್ದ ಆರೋಪದ ಮೇಲೆ ಬೆಂಗಳೂರು, ಚಿಕ್ಕಮಗಳೂರು, ಬೀದರ್‌, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಎಂಟು ಸರಕಾರಿ ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ದಾಳಿ ನಡೆಸಿ ಚಿನ್ನಾಭರಣ, ನಗದು ಸೇರಿದಂತೆ ಬರೋಬ್ಬರಿ 21.05 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

Advertisement

ಯಾರ ಬಳಿ ಏನೇನು ಸಿಕ್ಕಿತು?
1. ಎಂ. ಶೋಭಾ, ಜಂಟಿ ಆಯುಕ್ತೆ, ಸಾರಿಗೆ ಇಲಾಖೆ, ಬೆಂಗಳೂರು-ಒಟ್ಟು 6 ಕಡೆ ಶೋಧ. ಸ್ಥಿರಾಸ್ತಿ-45.36 ಲಕ್ಷ, ಚರಾಸ್ತಿ-2.63 ಕೋಟಿ ರೂ., ಒಟ್ಟು – 3.09 ಕೋಟಿ ರೂ.

2. ಎಸ್‌.ಎನ್‌. ಉಮೇಶ್‌, ತಾಲೂಕು ಆರೋಗ್ಯಾಧಿಕಾರಿ, ಕಡೂರು, ಚಿಕ್ಕಮಗಳೂರು. ಒಟ್ಟು ಎರಡು ಕಡೆ ಶೋಧ. ಸ್ಥಿರಾಸ್ತಿ-56.78 ಲಕ್ಷ ರೂ. ಚರಾಸ್ತಿ- 68.41 ಲಕ್ಷ ರೂ. ಒಟ್ಟು- 1.25 ಕೋಟಿ ರೂ.

3. ರವೀಂದ್ರ ಮೆಟ್ರೆ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಬಸವಕಲ್ಯಾಣ, ಬೀದರ್‌. ಒಟ್ಟು 5 ಕಡೆ ಶೋಧ. ಸ್ಥಿರಾಸ್ತಿ-1.72 ಕೋಟಿ ರೂ. ಚರಾಸ್ತಿ- 53.60 ಲಕ್ಷ ರೂ. ಒಟ್ಟು ಮೌಲ್ಯ-3.58 ಕೋಟಿ ರೂ.

4. ಪ್ರಕಾಶ್‌ ಶ್ರೀಧರ ಗಾಯಕವಾಡ್‌, ತಹಶೀಲ್ದಾರ್‌, ಖಾನಾಪೂರ, ಬೆಳಗಾವಿ, ಒಟ್ಟು 8 ಕಡೆ ಶೋಧ. ಸ್ಥಿರಾಸ್ತಿ- 3.58 ಕೋಟಿ ರೂ., ಚರಾಸ್ತಿ- 83.12 ಲಕ್ಷ ರೂ. ಒಟ್ಟು ಮೌಲ್ಯ-4.41 ಕೋಟಿ ರೂ.

Advertisement

5. ಎಸ್‌.ರಾಜು, ಯಲಹಂಕ ಆರ್‌ಟಿಒ (ನಿವೃತ್ತ), ಬೆಂಗಳೂರು, 5 ಕಡೆ ಶೋಧ. ಸ್ಥಿರಾಸ್ತಿ-4.27 ಕೋಟಿ ರೂ. ಚರಾಸ್ತಿ-74.85 ಲಕ್ಷ ರೂ., ಒಟ್ಟು ಮೌಲ್ಯ-5.02 ಕೋಟಿ ರೂ.

6. ಹುಚ್ಚಪ್ಪ ಎ.ಬಂಡಿವಡ್ಡರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಪ್ರಭಾರ), ಪುರಸಭೆ, ಗದಗ. ಐದು ಕಡೆ ಶೋಧ. ಸ್ಥಿರಾಸ್ಥಿ-76.50 ಲಕ್ಷ ರೂ. ಚರಾಸ್ಥಿ-82.46 ಲಕ್ಷ ರೂ. ಒಟ್ಟು ಮೌಲ್ಯ-1.58 ಕೋಟಿ ರೂ.

7. ಆರ್‌.ಎಚ್‌. ಲೋಕೇಶ್‌, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಬಳ್ಳಾರಿ, ಒಟ್ಟು 5 ಕಡೆ ಶೋಧ. ಸ್ಥಿರಾಸ್ತಿ- 1.46 ಕೋಟಿ ರೂ., ಚರಾಸ್ತಿ-57.60 ಲಕ್ಷ ರೂ., ಒಟ್ಟು ಮೌಲ್ಯ-2.03 ಕೋಟಿ ರೂ.

8. ಹುಲಿರಾಜ್‌, ಕಿರಿಯ ಎಂಜಿನಿಯರ್‌, ಜೆಸ್ಕಾಂ, ರಾಯಚೂರು, 2 ಕಡೆ ಶೋಧ. ಸ್ಥಿರಾಸ್ತಿ-1.20 ಕೋಟಿ ರೂ., ಚರಾಸ್ತಿ- 17.88 ಲಕ್ಷ ರೂ., ಒಟ್ಟು ಮೌಲ್ಯ-1.38 ಕೋಟಿ ರೂ.

ಆರ್‌ಟಿಒ ರಾಜು ಬಳಿ 5 ಕೋಟಿ ಮೌಲ್ಯದ ಆಸ್ತಿ!
ಆರ್‌ಟಿಒ ಅಧಿಕಾರಿ (ನಿವೃತ್ತ) ಎಸ್‌.ರಾಜು ಬಳಿ ಒಟ್ಟು 5.02 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇನ್ನು ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ. ಶೋಭಾ ಬಳಿ 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next