Advertisement

ಕೇಂದ್ರೀಯ ವಿವಿ ಹುದ್ದೆಗಳು 6 ತಿಂಗಳಲ್ಲಿ ಭರ್ತಿ: ಸಚಿವ ಪ್ರಧಾನ್‌

01:15 AM Apr 18, 2022 | Team Udayavani |

ಭುವನೇಶ್ವರ: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಬಿದ್ದಿರುವ ಬೋಧಕ ಹುದ್ದೆಗಳನ್ನು 6-8 ತಿಂಗಳಲ್ಲಿ ಭರ್ತಿ ಮಾಡಲಾಗುವುದು.

Advertisement

ಇದಕ್ಕಾಗಿ ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ಇತ್ತೀಚೆಗೆ ರಾಜ್ಯಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ, ದೇಶದ ವಿವಿಧ ಕೇಂದ್ರೀಯ ವಿವಿಗಳಲ್ಲಿ ಒಟ್ಟು 6,558 ಬೋಧಕ ಹಾಗೂ 15,227 ಬೋಧಕೇತರ ಹುದ್ದೆಗಳು ಖಾಲಿಯಿವೆ.

ಈ ಪೈಕಿ 4 ಸಾವಿರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಜಾಹೀರಾತು ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next