Advertisement

Wayanad ಭೂಕುಸಿತ ಭಾರೀ ಪ್ರಾಕೃತಿಕ ವಿಕೋಪ: 5 ತಿಂಗಳ ಬಳಿಕ ಕೇಂದ್ರ ಘೋಷಣೆ

09:32 PM Dec 31, 2024 | Team Udayavani |

ನವದೆಹಲಿ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವನ್ನು ಭಾರೀ ಪ್ರಾಕೃತಿಕ ವಿಕೋಪ ಎಂದು ಕೆಂದ್ರ ಸರ್ಕಾರ 5 ತಿಂಗಳ ಬಳಿಕ ಘೋಷಣೆ ಮಾಡಿದೆ. ಈ ಮೂಲಕ ವಿಪತ್ತು ಪರಿಹಾರ ನಿರ್ವಹಣ ನಿಧಿಯಿಂದ ಭೂಕುಸಿತದಿಂದ ಸಂಕಷ್ಟಕ್ಕೆ ತುತ್ತಾದವರ ಕುಟುಂಬಗಳಿಗೆ ನೆರವು ದೊರೆಯಲಿದೆ.

Advertisement

ಜೊತೆಗೆ ವಯನಾಡಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಭರಪೂರ ಅನುದಾನ ಸಿಗಲಿದೆ. 2024ರ ಜು.20ರಂದು ರಾತ್ರೋರಾತ್ರಿ ಭಾರೀ ಭೂಕುಸಿತ ಸಂಭವಿಸಿ 200ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದರು.

ಘಟನೆ ನಡೆದು 5 ತಿಂಗಳ ಬಳಿಕ ದುರಂತವನ್ನು ಕೇಂದ್ರ ಗೃಹ ಸಚಿವಾಲಯ ಭಾರೀ ಪ್ರಾಕೃತಿಕ ವಿಕೋಪ ಎಂದು ಘೋಷಿಸಿದ್ದು ಇದನ್ನು ವಯನಾಡು ಸಂಸದೆ ಪ್ರಿಯಾಂಕ ಗಾಂಧಿ ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next