Advertisement

ಕೇಕ್‌ ತಿನ್ನುವ ಸ್ಪರ್ಧೆ: ದಿವ್ಯಶ್ರೀ ಪ್ರಥಮ 

11:29 AM Oct 17, 2018 | Team Udayavani |

ಮೈಸೂರು: ದಸರಾ ಆಹಾರ ಮೇಳದಲ್ಲಿ ಶಾಲಾ ಬಾಲಕಿಯರಿಗಾಗಿ ನಡೆದ ಕೇಕ್‌ ತಿನ್ನುವ ಸ್ಪರ್ಧೆಯಲ್ಲಿ ಮೈಸೂರಿನ ಟೆರೇಷಿಯನ್‌ ಶಾಲೆಯ ವಿದ್ಯಾರ್ಥಿನಿ ದಿವ್ಯಶ್ರೀ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು. 

Advertisement

ನಗರದ ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಮಂಗಳವಾರ ಪ್ರೌಢಶಾಲೆ ವಿದ್ಯಾರ್ಥಿನಿಯರಿಗಾಗಿ ಕೇಕ್‌ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಆದರೆ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರು ಬಾರದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಟೆರೇಷಿಯನ್‌ ಶಾಲೆಯ ದಿವ್ಯಶ್ರೀ ಐದು ಪೀಸ್‌ ಕೇಕ್‌ ತಿಂದು ಪ್ರಥಮ ಸ್ಥಾನ ಪಡೆದರು. ಉಳಿದಂತೆ ಐಶ್ವರ್ಯ ಮತ್ತು ಹರ್ಷಿತಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 13 ವಿದ್ಯಾರ್ಥಿನಿಯರಲ್ಲಿ ಕೆಲವರು ಒಂದೆರಡು ಪೀಸ್‌ ಕೇಕ್‌ ತಿನ್ನುವಷ್ಟರಲ್ಲಿ ಸುಸ್ತಾಗಿ ಹೋದರು. 

ಇದಕ್ಕೂ ಮುನ್ನ ಬೆಳಗ್ಗೆ ಮಹಿಳಾ ಸಂಘಗಳಿಗಾಗಿ ಆಯೋಜಿಸಿದ್ದ ಕಾಯಿ ಹೋಳಿಗೆ, ವೆಜ್‌ ಪರೋಟ ಮತ್ತು ರೈಸ್‌ ಪಲಾವ್‌ ತಯಾರಿಕೆ ಸ್ಪರ್ಧೆ ಜನರ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಜೈನ್‌ಮಿಲನ್‌ ಸಂಘದ ರೂಪಾ, ಅಮಲಾ ಪ್ರಭು, ಪದ್ಮಿನಿ ಮತ್ತವರ ತಂಡ ಪ್ರಥಮ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಒಟ್ಟು 8 ಸ್ತ್ರೀಶಕ್ತಿ ಸಂಘಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಆಹಾರಮೇಳದಲ್ಲಿ ನಡೆದ ಕೊನೆಯ ಸ್ಪರ್ಧೆ ಇದಾಗಿದ್ದರಿಂದ ಸಾಕಷ್ಟು ಜನರು ವೀಕ್ಷಿಸಿದ ಖುಷಿಪಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next