Advertisement

WTA Finals: ಕೊಕೊ ಗಾಫ್ ಗೆ ಮೊದಲ ಪ್ರಶಸ್ತಿ

12:36 AM Nov 11, 2024 | Team Udayavani |

ರಿಯಾದ್‌: ಒಲಿಂಪಿಕ್‌ ಚಾಂಪಿಯನ್‌, ಚೀನದ ಜೆಂಗ್‌ ಕ್ವಿನ್ವೆನ್‌ ಅವರನ್ನು ಪರಾಭವಗೊಳಿಸಿದ ಕೊಕೊ ಗಾಫ್ ಮೊದಲ ಬಾರಿಗೆ ಡಬ್ಲ್ಯುಟಿಎ ಫೈನಲ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಮೆರಿಕನ್‌ ಆಟಗಾರ್ತಿಯ ಗೆಲುವಿನ ಅಂತರ 3-6, 6-4, 7-6 (2).

Advertisement

ನಿರ್ಣಾಯಕ ಸೆಟ್‌ನಲ್ಲಿ 2-0 ಮುನ್ನಡೆಯಿಂದ 3-5ಕ್ಕೆ ಕುಸಿದ ಕೊಕೊ ಗಾಫ್ಗೆ ಟೈ ಬ್ರೇಕರ್‌ನಲ್ಲಿ ಅದೃಷ್ಟ ಕೈ ಹಿಡಿಯಿತು. ಇಲ್ಲಿ ಮೊದಲ 6 ಅಂಕಗಳನ್ನು ತಮ್ಮದಾಗಿಸಿಕೊಂಡರು.

ಕೊಕೊ ಗಾಫ್ 2014ರ ಬಳಿಕ ಈ ಪ್ರಶಸ್ತಿ ಗೆದ್ದ ಅಮೆರಿಕದ ಮೊದಲ ಆಟಗಾರ್ತಿ. ಅಂದು ಸೆರೆನಾ ವಿಲಿಯಮ್ಸ್‌ ಚಾಂಪಿಯನ್‌ ಆಗಿದ್ದರು. 2004ರಲ್ಲಿ ಮರಿಯಾ ಶರಪೋವಾ ಗೆದ್ದ ಬಳಿಕ ಈ ಪ್ರಶಸ್ತಿಯನ್ನೆತ್ತಿದ ಕಿರಿಯ ಆಟಗಾರ್ತಿಯೂ ಹೌದು. ಆ ವರ್ಷವೇ ಕೊಕೊ ಗಾಫ್ ಜನನವಾಗಿತ್ತು!
ಪ್ರಶಸ್ತಿ ಹಾದಿಯಲ್ಲಿ ಕೊಕೊ ಗಾಫ್ ವಿಶ್ವದ ಇಬ್ಬರು ಅಗ್ರಮಾನ್ಯ ಆಟಗಾರ್ತಿಯರನ್ನು ಸೋಲಿಸಿದ್ದರು. ಗಾಫ್ಗೆ ಶರಣಾದವರೆಂದರೆ ಅರಿನಾ ಸಬಲೆಂಕಾ ಮತ್ತು ಇಗಾ ಸ್ವಿಯಾಟೆಕ್‌.

ವನಿತಾ ಡಬಲ್ಸ್‌ ಪ್ರಶಸ್ತಿ
ವನಿತಾ ಡಬಲ್ಸ್‌ ಪ್ರಶಸ್ತಿ ಗ್ಯಾಬ್ರಿ ಯೇಲಾ ಡಾಬ್ರೋವ್‌ಸ್ಕಿ (ಕೆನಡಾ)-ಎರಿನ್‌ ರೌಟಿಫ್ (ನ್ಯೂಜಿ ಲ್ಯಾಂಡ್‌) ಪಾಲಾಯಿತು. ಇವರು ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ-ಅಮೆರಿಕದ ಟೇಲರ್‌ ಟೌನ್ಸೆಂಡ್‌ ವಿರುದ್ಧ 7-5, 6-3 ಅಂತರದಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next