ರಾಮನಗರ: ಮೇಕೆದಾಟು ಪಾದಯಾತ್ರೆಯನ್ನು ಸರ್ಕಾರ ಇಂದು ತಡೆಯಲೇ ಬೇಕು. ತಡೆಯದಿದ್ದರೇ ನಮ್ಮದು ದುರ್ಬಲ ಸರ್ಕಾರ ಅಂತ ಭಾವಿಸಬೇಕಾಗುತ್ತದೆ ಎಂದು ಎಂಎಲ್ಸಿ ಸಿ.ಪಿ.ಯೋಗೇಶ್ವರ ಹೇಳಿದರು.
ನಗರದ ಹೊರವಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್ ಸಾಂಕ್ರಮಿಕ ರೋಗ ಹರಡುವುದನ್ನು ತಪ್ಪಿಸಲು ಪಾದಯಾತ್ರೆ ನಿಲ್ಲಲೇ ಬೇಕಾಗಿದೆ ಎಂದರು.
ಇದನ್ನೂ ಓದಿ:ವೀರಪ್ಪ ಮೊಯಿಲಿಗೆ ಕೋವಿಡ್ ಪಾಸಿಟಿವ್: ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಒಂದು ವರ್ಷದ ಕಾಲ ಡಿ.ಕೆ.ಶಿವಕುಮಾರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿ ಕೊಳ್ಳಲಿಲ್ಲ. ಭ್ರಷ್ಟರೊಬ್ಬರನ್ನು ಸೇರಿಸಿಕೊಳ್ಳಬೇಕೆ ಅಂತ ಯೋಚನೆ ಅವರಿಗಿತ್ತು. ಸಿದ್ದರಾಮಯ್ಯ ಅವರ ಬಗ್ಗೆ ಆಭಿಮಾನವಿದೆ. ಈ ಪುಂಡರೊಡನೆ ಸೇರ ಬಾರದು, ಪಾದಯಾತ್ರೆ ಮೊಟಕು ಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ನಮ್ಮ ಸರ್ಕಾರ ಪಾದಯಾತ್ರೆ ತಡೆಯುವ ವಿಚಾರದಲ್ಲಿ ವಿಫಲವಾಗಿಲ್ಲ. ತಾಳ್ಮೆಯಿಂದ ಕಾದು ನೋಡಿದೆ ಎಂದು ಅವರು ಪ್ರತಿಕ್ರಿಸಿದರು.