Advertisement
ಬರಮಾರು ನೇತ್ರಾವತಿ ನದಿಯಲ್ಲಿ ಅಂಬಿಗ ದಿವಾಕರ ನಾಪತ್ತೆಯಾಗಿದ್ಧಾರೆ.
Related Articles
Advertisement
ಜ.3ರ ಶುಕ್ರವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಬರಿಮಾರಿನಿಂದ ಸರಪಾಡಿಗೆ ಹೋಗಿ ಅಲ್ಲಿನ ಅಂಗಡಿಯೊಂದರಿಂದ ಮನೆಗೆ ತರಕಾರಿ ಸಾಮಾಗ್ರಿಗಳನ್ನು ಪಡೆದುಕೊಂಡು ವಾಪಸ್ ತೆರಳಿದ್ದರು. ಸುಮಾರು 11 ಗಂಟೆ ವೇಳೆ ದೋಣಿ ಬರಿಮಾರು ಕಡವಿನ ಬಾಗಿಲಿನಲ್ಲಿ ತೇಲಾಡುವ ಸ್ಥಿತಿಯಲ್ಲಿದ್ದು, ದಿವಾಕರ ಅವರು ಕಾಣಿಸದೆ ಹಿನ್ನೆಲೆ ಅವರ ಪತ್ನಿ ಸರಪಾಡಿಯ ಅಂಗಡಿಯೊಂದರ ಮಾಲಕರಿಗೆ ಫೋನ್ ಮೂಲಕ ಸಂಪರ್ಕಿಸಿ, ಇವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.
ಸರಪಾಡಿಯಿಂದ ಬರಿಮಾರು ಕಡೆಗೆ ಬಂದವರು ಮನೆಗೆ ತೆರಳದೆ ನಾಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬರಿಮಾರು ಕಡವಿನ ಬಾಗಿಲಿನಲ್ಲಿ ಹಸಿಹುಲ್ಲು ಕಟ್ಟು, ಮೊಬೈಲ್ ಮತ್ತು ಚಪ್ಪಲಿ ನದಿ ದಡದಲ್ಲಿ ಕಾಣಿಸಿಕೊಂಡಿದೆ.
ದಿವಾಕರ ಅವರಿಗೆ ಮೂರ್ಛೆ ರೋಗದ ಬಾಧೆಯಿದ್ದು, ಈ ಹಿಂದೆಯೂ ಒಮ್ಮೆ ಮೂರ್ಛೆರೋಗಕ್ಕೆ ತುತ್ತಾಗಿ ನದಿ ಬದಿಯಲ್ಲಿ ಬಿದ್ದುಕೊಂಡಿದ್ದ ಘಟನೆ ನಡೆದಿತ್ತು. ಬಳಿಕ ಸ್ಥಳೀಯರು ಅವರಿಗೆ ಕಬ್ಬಿಣದ ವಸ್ತುಗಳನ್ನು ತಾಗಿಸಿ ಎಚ್ಚರಿಸಿಕೊಂಡು ಬಂದ ಬಗ್ಗೆ ಹೇಳಿಕೊಂಡಿದ್ದರು.
ಇವತ್ತು ಕೂಡ ಮೂರ್ಛೆ ರೋಗ ಭಾದಿಸಿ ಬಿದ್ದಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ. ಸ್ಥಳೀಯರು ನದಿಭಾಗದ ಸುತ್ತಮುತ್ತಲು ಹುಡುಕಾಟ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿದ್ದಾರೆ.