ಹುಬ್ಬಳ್ಳಿ: ಬೆಂಗಳೂರಿನ ಆರ್.ವಿ. ಕಾಲೇಜ ಆಫ್ ಇಂಜನಿಯರಿಂಗ್‌ನಲ್ಲಿ ಎಬಿವಿಪಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮೂರು ದಿನಗಳ ಪ್ರೊಜೆಕ್ಟ್ ಪ್ರದರ್ಶನ ಸೃಷ್ಟಿ-2017ರಲ್ಲಿ ಬಿವಿಬಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜನಿಯರಿಂಗ್ ವಿಭಾಗದ ಸುಧೀಂದ್ರ, ಶಿವನಾಯಕ, ರಬ್ಟಾನಿ, ಸೈಯದ್ ಇನಾಮಾದಾರ ವಿದ್ಯಾರ್ಥಿಗಳು, ಆನಿಯನ್ ಟಾಪಿಂಗ್ ಮತ್ತು ಸಗ್ರಿಗೇಶನ್ ಮಷಿನ್ ಪ್ರೊಜೆಕ್ಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕಂಪ್ಯೂಟರ್ ಸಾಯಿನ್ಸ್ ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ರುದ್ರೇಶ ಹಿರೇಮಠ, ಶಶಾಂಕ ಅಂದನೂರ, ಶಿವಪ್ರಸಾದ ಬಿ.ಕೆ. ಇವರು ಉಬರ್ ಡಾಟಾ ಅನಾಲೇಸಿಸ್ ಪ್ರೊಜೆಕ್ಟ್‌ನಲ್ಲಿ ದ್ವಿತೀಯ ಸ್ಥಾನ, ಪ್ಯಾರಲಲ್ ಪ್ರೋಟಿನ್ ಕ್ಲಸ್ಟರಿಂಗ್ ಯುಜಿಂಗ್ ಓಪನ್ ಎಂ.ಐ. ಪ್ರೊಜೆಕ್ಟನ್‌ನ ವಿದ್ಯಾರ್ಥಿಗಳಾದ ಧ್ರುವದಾರ, ಲಕ್ಷ್ಮಣ ಹೆಗಡೆ, ನಂದಿತಾ ಆರ್.ಎಂ.ರಶ್ಮಿ ತೃತೀಯ ಸ್ಥಾನ ಪಡೆದಿದ್ದಾರೆ.
ರೋಡ್ ಕ್ರಾಸ್ ಅಸಿಸ್ಟನ್ಸ್ ಫಾರ್ μಜಿಕಲಿ ಚಾಲೇಂಜ್x ಪೀಪಲ್ ಪ್ರೊಜೆಕ್ಟ್‌ನಲ್ಲಿ ಸಿಟಿ ಸೆಕ್ಟರ್‌ನಲ್ಲಿ ವಿದ್ಯಾರ್ಥಿಗಳಾದ ವೈಷಾಖ ಎಂ., ಮಾಲತೇಶ ಶಿಬರದ್ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಷಯ ಮಂಡನೆ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗ ಪ್ರಥಮ, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗ ಹಾಗೂ ಎಲೆಕ್ಟ್ರಿಕಲ್ ಇಂಜನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸೃಷ್ಟಿ-2017ರಲ್ಲಿ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ| ಅಶೋಕ ಶೆಟ್ಟರ, ಕುಲಸಚಿವ ಪ್ರೊ| ಬಿ.ಎಲ್.ದೇಸಾಯಿ, ಬಿವಿಬಿ ಕಾಲೇಜು ಪ್ರಾಚಾರ್ಯ ಡಾ| ಪಿ.ಜಿ. ತೇವರಿ, ಪ್ರೊ| ವಿ.ಎಸ್. ಹೊಂಬಾಳಿಮಠ ಹಾಗೂ ಪ್ರಾಧ್ಯಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.