Advertisement

Train; ಬಿದ್ದ ಪ್ರಯಾಣಿಕನ ಮೇಲೆತ್ತಲು ಹಿಮ್ಮುಖವಾಗಿ ಚಲಿಸಿತು!

12:33 AM Jan 07, 2025 | Team Udayavani |

ನಾಸಿಕ್‌: ಅಪರೂಪದ ಘಟನೆಯೊಂದರಲ್ಲಿ, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕನ್ನು ಮೇಲೆತ್ತಲು ಮುಂಬಯಿ-ನಾಂದೇಡ್‌ ತಪೋವನ್‌ ಎಕ್ಸ್‌ಪ್ರೆಸ್‌ ರೈಲು ಸುಮಾರು 700 ಮೀಟರ್‌ ಹಿಮ್ಮುಖವಾಗಿ ಚಲಿಸಿದ ಘಟನೆ ಮನ್ಮಾಡ್‌ ಜಂಕ್ಷನ್‌ ಬಳಿ ನಡೆದಿದೆ. ಗಾಯಾಳು ಪ್ರಯಾಣಿಕ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಶನಿವಾರ ಎಕ್ಸ್‌ಪ್ರೆಸ್‌ ರೈಲು ಮನ್ಮಾಡ್‌ ಜಂಕ್ಷನ್‌ ಸಮೀಪಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕೆಲವರು ರೈಲಿನ ಚೈನ್‌ ಇಳಿದು ತುರ್ತು ನಿಲ್ಲಿಸಿ, ಚಾಲಕ ಅನುಮತಿ ಪಡೆದು ಕೆಳಗೆ ಬಿದ್ದ ಗಾಯಾಳು ಪ್ರಯಾಣಿಕನ್ನು ಮೇಲೆತ್ತಲು 700 ಮೀಟರ್‌ ಹಿಂದಕ್ಕೆ ಓಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next