ಮುಂಬಯಿ: ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಗಡಿ ಭಾಗದಲ್ಲಿ ಸುರಕ್ಷತೆಗಾಗಿ ಹೋರಾಡಿ ಮಡಿದ ಯೋಧರನ್ನು ಯೋಧರನ್ನು ಸ್ಮರಿಸುವುದು ಮತ್ತು ಅವರ ಪರಿ ವಾರವನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಂಟ್ಸ್ ಫೋರಂ ಮೀರಾ- ಭಾಯಂದರ್‌ನ ಗೌರವಾ ಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಅವರು ಅಭಿಪ್ರಾಯಿಸಿದರು.
ಆ. 15 ರಂದು ಬಂಟ್ಸ್ ಫೋರಂ ಮೀರಾರೋಡ್-ಭಾಯಂದರ್ ವತಿಯಿಂದ ಸಂಸ್ಥೆಯ ಕಚೇರಿಯ ಆವರಣದಲ್ಲಿ ನಡೆದ 72 ನೇ ಸ್ವಾತಂತ್ರÂ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣಗೈದು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮುಜಾಫರ್ ಹುಸೇನ್, ಸ್ಥಳೀಯ ನಗರ ಸೇವಕ ಪ್ರಶಾಂತ್ ದಳ್ವಿ, ಹೇತಲ್ ಪಾರ್ಮರ್, ಮಾಜಿ ನಗರ ಸೇವಕ ನ್ಯಾಯವಾದಿ ಎಸ್. ಎ. ಖಾನ್, ಚಂದ್ರಕಾಂತ್ ಮೋದಿ ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು.
ಬಂಟ್ಸ್ ಫೋರಂ ಇದರ ಗೌರವ ಕಾರ್ಯದರ್ಶಿ ಹರ್ಷಕುಮಾರ್ ಡಿ. ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಇನ್ನ ವಂದಿಸಿದರು. ಅರುಣ್ ಶೆಟ್ಟಿ ಎರ್ಮಾಳ್ ಕಾರ್ಯಕ್ರಮ ನಿರ್ವಹಿಸಿದರು. ವಿಶೇಷ ಆಮಂತ್ರಿತರುಗಳಾಗಿ ಮೀರಾ-ಭಾಯಂದರ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಮಧುಕರ ಕೆ. ಶೆಟ್ಟಿ, ಮೀರಾ-ಭಾಯಂದರ್ ವ್ಯಾಪಾರಿ ಮಹಾಮಂಡಳದ ಅಧ್ಯಕ್ಷ ದುರ್ಗಾಪ್ರಸಾದ್ ಸಾಲ್ಯಾನ್, ತುಳುನಾಡ ಸೇವಾ ಸಂಘದ ಅಧ್ಯಕ್ಷ ಡಾ| ರವಿರಾಜ್ ಸುವರ್ಣ, ಮೀರಾ-ಡಹಾಣೂ ಬಂಟ್ಸ್‌ನ ಸ್ಥಳೀಯ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ವಿದ್ಯಾದಾಯಿನಿ ಸಭಾ ಫೋರ್ಟ್ ಜತೆ ಕಾರ್ಯದರ್ಶಿ ಉಮೇಶ್ ಕೆ. ಅಂಚನ್ ಅವರು ಉಪಸ್ಥಿತರಿದ್ದರು.
ಬಂಟ್ಸ್ ಫೋರಂ ಇದರ ಉಪಾಧ್ಯಕ್ಷ ದಿವಾಕರ ಎಂ. ಶೆಟ್ಟಿ ಶಿರ್ಲಾಲ್, ಆನಂದ ಎನ್. ಶೆಟ್ಟಿ ಕುಕ್ಕುಂದೂರು, ಜತೆ ಕಾರ್ಯದರ್ಶಿ ವಿಜಯಲಕ್ಷ್ಮೀ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಶರ್ಮಿಳಾ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ರವೀಂದ್ರ ಶೆಟ್ಟಿ, ಪೂಜಾ ವಿಭಾಗದ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ, ಸಂಘಟನಾಧ್ಯಕ್ಷ ಶೈಲೇಶ್ ಶೆಟ್ಟಿ, ಮ್ಯಾರೇಜ್ ಸೆಲ್‌ನ ಕಾರ್ಯಾಧ್ಯಕ್ಷೆ ಯೋಗಿನಿ ಡಿ. ಶೆಟ್ಟಿ, ಭಜನ ಸಮಿತಿಯ ಕಾರ್ಯಾಧ್ಯಕ್ಷೆ ಶುಖವಾಣಿ ಡಿ. ಶೆಟ್ಟಿ, ಸದಸ್ಯರುಗಳಾದ ಸತೀಶ್ ಪಿ. ಶೆಟ್ಟಿ, ಪ್ರಸಾದ್ ಹೆಗ್ಡೆ, ವಿನಯಾ ಎಚ್. ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ರಮೇಶ್ ಶೆಟ್ಟಿ, ವೈ. ಟಿ. ಶೆಟ್ಟಿ, ಶುಭದೀಪ್ ಶೆಟ್ಟಿ, ಜೈರಾಜ್ ಶೆಟ್ಟಿ, ದಾಮೋದರ ಶೆಟ್ಟಿ, ಮಹಾಬಲ ಸಮಾನಿ, ಮಲ್ಲಿಕಾ ಕೆ. ಶೆಟ್ಟಿ, ಸುಲೋಚನಾ ಜೆ. ಶೆಟ್ಟಿ, ಶುಭಲತಾ ವಿ. ಶೆಟ್ಟಿ, ದಿವ್ಯಾ ವಿ. ಶೆಟ್ಟಿ, ದಿವ್ಯಾ ಪಿ. ಹೆಗ್ಡೆ, ಧೀರಜ್ ಎ. ಶೆಟ್ಟಿ, ಹರಿಣಿ ಎ. ಶೆಟ್ಟಿ, ನಿನಾದ್ ಜೆ. ಶೆಟ್ಟಿ, ಶಾಲಿನಿ ಶೆಟ್ಟಿ, ರವೀಂದ್ರ ಶೆಟ್ಟಿ, ರೇಷ್ಮಾ ಸಂತೋಷ್ ರೈ, ಸತೀಶ್ ಶೆಟ್ಟಿ, ವೀಣಾ ಶೆಟ್ಟಿ, ಸುಶೀಲಾ ಧೀರಜ್ ಶೆಟ್ಟಿ, ಸಂಸ್ಥೆಯ ಇತರ ಸದಸ್ಯರು, ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.