Advertisement

ಬೌದ್ಧ ಧರ್ಮ ಜಗತ್ತಿನ ವೈಜ್ಞಾನಿಕ ಧರ್ಮ

09:47 PM May 18, 2019 | Lakshmi GovindaRaj |

ತಿ.ನರಸೀಪುರ: ಜಾತಿ ಪ್ರಬಲವಾಗಿ ಬೇರುಬಿಟ್ಟಿದ್ದು, ಜಾತಿ ರಹಿತ ಸಮಾಜ ನಿರ್ಮಾಣ ಹಾಗೂ ಜಾತೀಯತೆ ನಿರ್ಮೂಲನೆಗೆ ಬೌದ್ಧ ಧಮ್ಮ ಮದ್ದು ಆಗಿದೆ. ಸಂಪತ½ರಿತ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಬೌದ್ಧ ಧಮ್ಮ ವೈಜ್ಞಾನಿಕ ಧರ್ಮ ಎನಿಸಿಕೊಂಡಿದೆ ಎಂದು ಸಂಸದ ಆರ್‌.ಧ್ರುವನಾರಾಯಣ ಹೇಳಿದರು.

Advertisement

ಪಟ್ಟಣದ ತ್ರಿವೇಣಿ ನಗರದ ನಳಂದ ಬುದ್ಧವಿಹಾರದಲ್ಲಿ ಗೌತಮಬುದ್ಧ ಎಜುಕೇಷನಲ್‌ ಆ್ಯಂಡ್‌ ಕಲ್ಚರಲ್‌ ಟ್ರಸ್ಟ್‌ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 2563ನೇ ಬುದ್ಧ ಪೂರ್ಣಿಮೆ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಹುಟ್ಟಿದ ಬೌದ್ಧ ಧರ್ಮ ಚೀನಾ, ಜಪಾನ್‌ ಮತ್ತಿತರ ದೇಶಗಳನ್ನು ವ್ಯಾಪಿಸಿ, ಅಲ್ಲಿನ ಜನರು ಶಾಂತಿ, ನೆಮ್ಮದಿಯಿಂದ ಅಭಿವೃದ್ಧಿ ಜೀವನ ನಡೆಸುತ್ತಿದ್ದಾರೆ. ಈ ಮಾರ್ಗದಲ್ಲಿ ನಾವೂ ಮುನ್ನಡೆಯೋಣ ಎಂದರು.

ಮಹಾನ್‌ ಚೇತನರು: ರಾಜನಾಗಿದ್ದ ಗೌತಮ ಬುದ್ಧ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಅಂಬೇಡ್ಕರ್‌ ಸುಖೀ ಜೀವನ ನಡೆಸಬಹುದಿತ್ತು. ಆದರೆ, ಈ ಮಹಾನ್‌ ಚೇತನರೂ ಸಮಾಜಕ್ಕಾಗಿ ಬದುಕನ್ನು ಮುಡಿಪಾಗಿಟ್ಟರು.

ಅಶೋಕ ಸಾಮ್ರಾಟರು ಬೌದ್ಧ ಧಮ್ಮದ ಅಭಿವೃದ್ಧಿಗೆ ಶ್ರಮಿಸಿದ ನಂತರ ದೇಶದಲ್ಲಿ ಅಂಬೇಡ್ಕರ್‌ ಬುದ್ಧ ಧಮ್ಮವನ್ನು ಅನುಸರಿಸಿದರು. ತದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ಧಮ್ಮ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ನೀಡಿದವು. ನಾವು ನೀವೆಲ್ಲರೂ ಬುದ್ಧ ಹಾಗೂ ಅಂಬೇಡ್ಕರ್‌ ತೋರಿದ ಮಾರ್ಗದಲ್ಲಿ ನಡೆಯೋಣ ಎಂದು ಸಲಹೆ ನೀಡಿದರು.

Advertisement

ಜಗತ್ತಿಗೆ ಬೆಳಕು: ವರುಣಾ ಶಾಸಕ ಡಾ.ಎಸ್‌.ಯತೀಂದ್ರ ಮಾತನಾಡಿ, ದೇಶದಲ್ಲಿ ಜಾತೀಯತೆ, ಸಾಮಾಜಿಕ ಅಸಮಾನತೆ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಬೌದ್ಧ ಧರ್ಮ ಜಗತ್ತಿಗೆ ಬೆಳಕಾಗಿ ಪ್ರಜ್ವಲಿಸಿತು.

ನಳಂದ ಬುದ್ಧ ವಿಹಾರದ ಧಮ್ಮ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಹಾರದ ಕಟ್ಟಡಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು. ಸಾಮಾಜಿಕ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ನಳಂದ ಬುದ್ಧ ವಿಹಾರದ ಬೋದಿರತ್ನ ಭಂತೇಜಿ, ಗೌತಮ ಬುದ್ಧನ ಹಿನ್ನೆಲೆ ಮತ್ತು ಧಮ್ಮದ ಬಗ್ಗೆ ಮಾಹಿತಿ ನೀಡಿದರು. ವಿದ್ಯೋದಯ ಬಾಲಿಕ ಪದಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಬಿ.ಸಿ.ಇಂದಿರಮ್ಮ, ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್‌.ಎನ್‌.ಸಿದ್ಧಾರ್ಥ, ಮಾಜಿ ಸದಸ್ಯ ಕೆ.ಮಹದೇವ, ತಾಪಂ ಸದಸ್ಯ ಎಂ.ರಮೇಶ್‌, ಪುರಸಭಾ ಸದಸ್ಯರಾದ ಸಿ.ಪ್ರಕಾಶ್‌, ಎಲ್‌.ಮಂಜುನಾಥ್‌, ಬಿ.ಬೇಬಿ ಹೇಮಂತ್‌ಕುಮಾರ್‌, ಸಮಾಜ ಕಲ್ಯಾಣಾಧಿಕಾರಿ ಸುಧಾಮಣಿ, ಬಿಳಿಗಿರಿ ರಂಗಸ್ವಾಮಿ ಬೆಟ್ಟದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆಲ್ದೂರು ಸಿ.ರಾಜಶೇಖರ್‌, ಎಪಿಎಂಸಿ ಸದಸ್ಯರಾದ ಕೆ.ಬಿ.ಪ್ರಭಾಕರ,

ಡಣಾಯಕನಪುರ ಸ್ವಾಮಿ, ವರುಣಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಮುದ್ದೇಗೌಡ, ಟ್ರಸ್ಟಿಗಳಾದ ಎನ್‌.ಲಿಂಗಪ್ಪಾಜಿ, ಬಿ.ಆರ್‌.ಪುಟ್ಟಸ್ವಾಮಿ, ಸೀನಪ್ಪ, ವಕೀಲ ಮೂರ್ತಿ, ಮರಿಮಹದೇವಯ್ಯ, ಶಿವಣ್ಣ, ಪುಟ್ಟರಾಜು, ಸಂಕೇತ್‌, ಮಹೇಶ್‌, ಎಚ್‌.ಡಿ.ಮಾದಪ್ಪ, ಡಿಜೆಎಸ್‌ ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ್‌, ದಸಂಸ ಸಂಚಾಲಕ ಕುಕ್ಕೂರು ರಾಜು, ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಕ್ಷೇತ್ರ ಉಸ್ತವಾರಿ ಬಿ.ಮಹದೇವಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next