Advertisement

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

02:24 AM Oct 25, 2024 | Team Udayavani |

ಬಹುಜನರಿಗೆ ಅನುಕೂಲವಾಗುವುದಾದರೆ ಒಬ್ಬರಿಗೆ ತೊಂದರೆಯಾದರೂ ಪರವಾಗಿಲ್ಲ ಎನ್ನುತ್ತದೆ ನ್ಯಾಯ ಧರ್ಮ. ಯುದ್ಧದಲ್ಲಿ ಬಹುಜನರಿಗೆ ತೊಂದರೆಯೇ ಆಗುವುದು. ಅರ್ಜುನ ಕುಲನಾಶದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾನೆ. ಕುಲಗಳೇ ನಾಶವಾದ ಮೇಲೆ ಕುಲಧರ್ಮ ಹೇಗಿರಲು ಸಾಧ್ಯ? ಮುಂದೆ ಸಮಾಜದಲ್ಲಿ ತೋರಿಸಲಾದರೂ ಮಾಡೆಲ್‌ ಕುಲ ಬೇಕಲ್ಲವೆ? ಕುಲಧರ್ಮವನ್ನು ಅನುಸರಿಸುವವರಿಲ್ಲದಿದ್ದರೆ ಧರ್ಮ ನಾಶವಾದಂತೆ. ಆ ಜಾಗದಲ್ಲಿ ಅಧರ್ಮ ಬರುತ್ತದೆ. ಕುಲಧರ್ಮ ನಾಶವಾದರೆ ಆಚರಿಸಲು ಮಾದರಿ ಇಲ್ಲವಾಗುತ್ತದೆ. ಧರ್ಮದ ಸ್ಥಾನದಲ್ಲಿ ಅಧರ್ಮ ಆವರಿಸುತ್ತದೆ. ಹಿಂದಿನವರು ಒಂದೊಂದು ಕುಲದವರಿಗೆ ಒಂದೊಂದು ಸಂಸ್ಕೃತಿಯ ರಕ್ಷಣೆಯ ಕೆಲಸಗಳನ್ನು ಹಂಚಿ ಹಾಕಿದ್ದರು.

Advertisement

ಎಲ್ಲ ಮೌಲ್ಯಗಳ‌ನ್ನು ಎಲ್ಲರೂ ರಕ್ಷಣೆ ಮಾಡಲು ಆಗುವುದಿಲ್ಲ. ದೇವಸ್ಥಾನಗಳಲ್ಲಿ ವಿವಿಧ ಸೇವಾ ಕಾರ್ಯಗಳನ್ನು ನಿಗದಿಪಡಿಸಿರುವುದಿಲ್ಲವೆ ಹಾಗೆ ಇದು. ಈ ಕುಲದವರು ಹೋದರೆ ಮುಂದಿನ ಗತಿ ಏನು ಎಂಬುದು ಅರ್ಜುನನ ಪ್ರಶ್ನೆ. ಎಲ್ಲ ಸಂಸ್ಕೃತಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ಕ್ಷತ್ರಿಯರದ್ದು. ಕ್ಷತ್ರಿಯರೇ ನಾಶವಾದರೆ ಮುಂದೇನು? ದೇಶದಲ್ಲಿ ಸೈನ್ಯವೇ ನಾಶವಾದರೆ ದೇಶದ ರಕ್ಷಣೆ ಹೇಗೆ? ಕ್ಷತ್ರಿಯರಿಲ್ಲದ ಕಾರಣ ಕ್ಷತ್ರಿಯ ಕುಲಧರ್ಮ ಮತ್ತು ರಕ್ಷಕರೇ ಇಲ್ಲದ ಕಾರಣ ಇತರರ ಕುಲಧರ್ಮಗಳೂ ಹೀಗೆ ಎರಡು ಬಗೆಯ ನಾಶವಾಗುತ್ತದೆ ಎಂದು ಅರ್ಜುನ ಹೇಳುತ್ತಾನೆ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next