Advertisement
ನೂತನ ಕ್ಯಾಪ್ಟನ್ ಆದ ಮಂಜು ಅವರು ಮನೆ ಕೆಲಸ ಹಂಚಿದ ಬಳಿಕ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ನಮಗೆ ಕಿಚನ್ ರೂಮ್ ಕೆಲಸ ಮಾಡೋಕೆ ಇಷ್ಟವಿಲ್ಲವೆಂದು ಐಶ್ವರ್ಯಾ ಹಾಗೂ ಶಿಶಿರ್ ಅವರು ಮಂಜು ಬಳಿ ಹೇಳಿದ್ದಾರೆ.
Related Articles
Advertisement
ಗೌತಮಿ ಅವರು ಹೇಳಿದ್ದನ್ನೇ ಗಣನೆಗೆ ತೆಗೆದುಕೊಳ್ಳಬೇಡಿ. ನಿಮ್ಮ ನಿರ್ಧಾರವನ್ನು ಸಹ ತೆಗೆದುಕೊಳ್ಳಿ ಎಂದು ಮೋಕ್ಷಿತಾ ಅವರು ಮಂಜು ಅವರಿಗೆ ಹೇಳಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಹನುಮಂತು ಗೇಮ್ ಬಿಟ್ಟು ಕೊಟ್ಟಿದ್ದಕ್ಕೆ ಮಂಜು ಅವರು ಕ್ಯಾಪ್ಟನ್ ಆಗಲು ಕಾರಣವಾಯಿತು ಎನ್ನುವ ಪ್ರಶ್ನೆಗೆ ಚೈತ್ರಾ ಅವರು ಹೌದು ಎಂದು ಉತ್ತರಿಸಿದ್ದಾರೆ. ಹನುಮಂತು ನಿಧಾನವಾಗಿ ಆಡಿದರು ಎಂದು ಅವರು ಹೇಳಿದ್ದಾರೆ.
ಮಂಜಣ್ಣ ಅವರು ಗೌತಮಿ ಅವರು ಹೇಳಿದಂತೆ ಕೇಳುತ್ತಾರೆ ಎನ್ನುವ ಪ್ರಶ್ನೆಗೆ ಮೋಕ್ಷಿತಾ, ಸುರೇಶ್ ಅವರು ಹೌದೆಂದು ಉತ್ತರಿಸಿದ್ದಾರೆ. ಇದನ್ನು ಗೌತಮಿ, ಮಂಜು ಒಪ್ಪಿಲ್ಲ.
ಕೆಲ ಗಾದೆ ಮಾತುಗಳನ್ನು ಕೊಟ್ಟು ಆ ಗಾದೆ ಮನೆಯಲ್ಲಿ ಯಾರಿಗೆ ಸೂಕ್ತವಾಗುತ್ತದೆ ಎಂದು ಪ್ರಶ್ನೆ ಕೇಳಲಾಗಿದೆ.
ಕುಣಿಯೋಕೆ ಬರದವರು ನೆಲ ಡೊಂಕು ಎನ್ನುವ ಮಾತಿಗೆ ರಜತ್ ಅವರು ಸುರೇಶ್ ಅವರಿಗೆ ನೀಡಿದ್ದಾರೆ. ಅತಿ ವಿನಯಂ ದೂರ್ತ ಲಕ್ಷಣಂ ಗಾದೆ ಮಾತಿಗೆ ತ್ರಿವಿಕ್ರಮ್ ಅವರು ಸೂಕ್ತವಾಗುತ್ತಾರೆ ಎಂದು ಶೋಭಾ ಅವರು ಹೇಳಿದ್ದಾರೆ.
ಆರು ಕೊಟ್ಟರೆ ಅತ್ತೆ ಕಡೆ ಮೂರು ಕೂಟ್ರೆ ಸೊಸೆ ಎನ್ನುವ ಮಾತಿಗೆ ಚೈತ್ರಾ ಅವರು ಸೂಕ್ತವಾಗುತ್ತಾರೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಗುಂಪಲ್ಲಿ ಗೋವಿಂದ ಎನ್ನುವ ಮಾತಿಗೆ ಧನರಾಜ್ ಅವರು ಸೂಕ್ತವಾಗುತ್ತಾರೆ ಎಂದು ಧರ್ಮ ಅವರು ಹೇಳಿದ್ದಾರೆ.
ಮಾಡೋದೆಲ್ಲ ಅನಾಚಾರ ಮನೆಮುಂದೆ ಬೃಂದಾವನ ಎನ್ನುವ ಮಾತಿಗೆ ತ್ರಿವಿಕ್ರಮ್ ಅವರು ಸೂಕ್ತವಾಗುತ್ತಾರೆ ಎಂದು ಚೈತ್ರಾ ಅವರು ಹೇಳಿದ್ದಾರೆ.
ಎಲಿಮಿನೇಷನ್ ನಿಂದ ಸೇಫ್ ಆದವರು:ಚೈತ್ರಾ, ಧರ್ಮ, ಹನುಮಂತು, ಗೌತಮಿ, ಮೋಕ್ಷಿತಾ, ಮಂಜು, ತ್ರಿವಿಕಮ್ ಅವರ ಪೈಕಿ ಕಡಿಮೆ ಮತ ಬಂದ ಕಾರಣ ಧರ್ಮ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಧರ್ಮ ಅವರು ಆರಂಭದಿಂದಲೂ ಅಷ್ಟು ಆ್ಯಕ್ಟಿವ್ ಆಗಿ ಕಾಣಿಸಿಕೊಂಡಿಲ್ಲ. ಆದರೆ ಕಳೆದ ಎರಡು ವಾರದಿಂದ ಅಸಲಿ ಆಟ ಶುರು ಮಾಡಲು ಶುರು ಮಾಡಿದ್ದರು. ಆದರೆ ಮತ ಕಡಿಮೆ ಬಂದ ಕಾರಣ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ. ನನಗೆ ಈ ವಾರ ತುಂಬಾ ಮುಖ್ಯವಾಗಿತ್ತು. ಅಸಲಿ ಆಟವನ್ನು ನಾನು ಶುರು ಮಾಡಿರಲಿಲ್ಲ. ಇಲ್ಲಿರುವವರ ಮುಖವಾಡವನ್ನು ಕಳಚಬೇಕಿದೆ ಎಂದು ಈ ವಾರ ಸೇಫ್ ಆಗಿರುವ ಚೈತ್ರಾ ಅವರು ಹೇಳಿದ್ದಾರೆ. ದೊಡ್ಮನೆಯಿಂದ ಕಣ್ಣೀರುಡುತ್ತಲೇ ಧರ್ಮ ಅವರು ಆಚೆ ಬಂದಿದ್ದಾರೆ. ಕಳೆದ ವಾರ ಅವರ ಸ್ನೇಹಿತೆ ಅನುಷಾ ಅವರು ಆಚೆ ಬಂದಿದ್ದರು. ದೊಡ್ಮನೆಗೆ ಧರ್ಮ ಅವರ ಜತೆಯೇ ಅನುಷಾ ಅವರು ಎಂಟ್ರಿ ಕೊಟ್ಟಿದ್ದರು. ಕಳೆದ ವಾರ ಅನುಷಾ ಈ ವಾರ ಧರ್ಮ ಅವರು ಆಚೆ ಬಂದಿದ್ದಾರೆ.