Advertisement
ಬುಧವಾರದ 3ನೇ ಸುತ್ತಿನ ಸ್ಪರ್ಧೆಯಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ ಡಿ. ಗುಕೇಶ್, ಕೇವಲ 37 ನಡೆಗಳಲ್ಲೇ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು. ಆರಂಭಿಕ ಪಂದ್ಯದಲ್ಲಿ ಲಿರೆನ್ ಗೆದ್ದರೆ, 2ನೇ ಪಂದ್ಯ ಡ್ರಾಗೊಂಡಿತ್ತು. ಇನ್ನೂ 11 ಪಂದ್ಯಗಳು ನಡೆಯಲಿವೆ.
ಟೈಮ್ ಕಂಟ್ರೋಲ್ ವಿಭಾಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಲಿರೆನ್ ತನ್ನ 31ನೇ ನಡೆಯ ವೇಳೆ ಇಕ್ಕಟ್ಟಿಗೆ ಸಿಲುಕಿದ್ದರು. ಇದೊಂದೇ ನಡೆಗಾಗಿ ಅವರು 4 ನಿಮಿಷ ತೆಗೆದುಕೊಂಡರು. ಉಳಿದ ಕೇವಲ 2 ನಿಮಿಷಗಳಲ್ಲಿ ಅವರು 9 ನಡೆಗಳ ಮೂಲಕ, 40 ನಡೆಗಳ ಗಡಿಯನ್ನು ದಾಟಬೇಕಾದ್ದರಿಂದ ಒತ್ತಡ ಹೆಚ್ಚಾಯಿತು. 37ನೇ ನಡೆಯ ವೇಳೆ ಡಿಂಗ್‌ಗೆ ನೀಡಿದ್ದ 120 ನಿಮಿಷಗಳ ಕಾಲಾವಧಿ ಮುಗಿದೇ ಹೋಯಿತು. ಹೀಗಾಗಿ ಅವರು ಸೋಲಬೇಕಾಯಿತು. ಏನಿದು ಟೈಮ್ ಕಂಟ್ರೋಲ್?
ಈ ವಿಭಾಗದಲ್ಲಿ ಮೊದಲ 40 ನಡೆಗಳಿಗೆ 120 ನಿಮಿಷಗಳ ಕಾಲಾವಕಾಶವಿರುತ್ತದೆ. ಈ ಅವಧಿ ಯೊಳಗೆ 40 ನಡೆಗಳನ್ನು ಪೂರ್ಣ ಗೊಳಿಸಿದರೆ ಮಾತ್ರ ಆಟ ಮುಂದು ವರಿಸಲು ಹೆಚ್ಚುವರಿ 60 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಇಲ್ಲಿ ಲಿರೆನ್ ವಿಫಲವಾಗಿದ್ದಾರೆ. 14 ಸುತ್ತಿನ ಈ ಸ್ಪರ್ಧೆ ಮುಕ್ತಾಯ ಗೊಳ್ಳುವುದರೊಳಗೆ ಮೊದಲು 7.5 ಅಂಕ ಗಳಿಸುವ ಸ್ಪರ್ಧಿ ವಿಜೇತರಾಗುತ್ತಾರೆ. ಒಂದು ವೇಳೆ 14 ಸುತ್ತಿನ ಬಳಿಕವೂ ಇಬ್ಬರ ಅಂಕ ಟೈ ಆದರೆ, ಆಗ ಟೈಬ್ರೇಕರ್ ನಡೆಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.