ಮುಂಬಯಿ : ನಿನ್ನೆ ಸೋಮವಾರದ ರಾಲಿಯನ್ನು ಇಂದು ಮಂಗಳವಾರ ಕೂಡ ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗಿನ ವಹಿವಾಟಿನಲ್ಲಿ 150 ಅಂಕಗಳ ಜಿಗಿತವನ್ನು ಸಾಧಿಸಿ 36,869.34 ಅಂಕಗಳ ಹೊಸ ದಾಖಲೆಯ ಎತ್ತರವನ್ನು ತಲುಪಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ 367.37 ಅಂಕಗಳನ್ನು ಸಂಪಾದಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬೆಳಗ್ಗೆ 10.45ರ ಹೊತ್ತಿಗೆ 155.54 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,874.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 53.60 ಅಂಕಗಳ ಮುನ್ನಡೆಯೊಂದಿಗೆ 11,138.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬಜಾಜ್ ಆಟೋ, ಯುಪಿಎಲ್, ಮಾರುತಿ ಸುಜುಕಿ, ಬಜಾಜ್ ಫಿನಾನ್ಸ್, ಹೀರೋ ಮೋಟೋಕಾರ್ಪ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಐಡಿಯಾ ಸೆಲ್ಯುಲರ್, ಗ್ರಾಸಿಂ, ಅಲ್‌ಟ್ರಾಟೆಕ್ ಸಿಮೆಂಟ್, ಹಿಂಡಾಲ್ಕೊ, ವೇದಾಂತ; ಟಾಪ್ ಲೂಸರ್‌ಗಳು : ಬಜಾಜ್ ಫಿನಾನ್ಸ್, ಸಿಪ್ಲಾ, ವಿಪ್ರೋ, ಎಚ್ ಸಿ ಎಲ್ ಟೆಕ್, ರಿಲಯನ್ಸ್.
ಡಾಲರ್ ಎದುರು ರೂಪಾಯಿ ಇಂದು ಆರಂಭಿಕ ವಹಿವಾಟಿನಲ್ಲಿ 15 ಪೈಸೆಯಷ್ಟು ಕುಸಿದು 69.01 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.