Advertisement

ಮುಂಬಯಿ ಶೇರು: ಹೊಸ ಎತ್ತರದ ದಾಖಲೆ; 133 ಅಂಕ ಏರಿಕೆ

04:44 PM May 15, 2017 | udayavani editorial |

ಮುಂಬಯಿ:  ಉತ್ತಮ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು, ಆರ್‌ಬಿಐ ಬಡ್ಡಿ ದರ ಕಡಿತಕ್ಕೆ ಅನುಕೂಲಕರ ವಾತಾವರಣ ಮತ್ತು ಉತ್ತಮ ಮುಂಗಾರು ಮಳೆಯ ನಿರೀಕ್ಷೆ – ಹೀಗೆ ಹಲವಾರು ಉತ್ತಮ ಕಾರಣಗಳ ಬಲದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 133.97 ಅಂಕಗಳ ಏರಿಕೆಯೊಂದಿಗೆ 30,322.12 ಅಂಕಗಳ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು. ಆ ಮೂಲಕ ಹೊಸ ಕ್ಲೋಸಿಂಗ್‌ ಹೈ ದಾಖಲಿಸಿತು. 

Advertisement

ಇದೇ ರೀತಿ ರಾಷ್ಟ್ರೀಯ ಶೇರ ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.50 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 9,445.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಮುಂಬಯಿ ಶೇರು ಪೇಟೆ ಸೂಚ್ಯಂಕ ಏರಿಕೆಗೆ ಇಂದು ಬ್ಯಾಂಕ್‌, ಎಫ್ಎಂಸಿಜಿ, ಮೆಟಲ್‌ ಮತ್ತು ಫಾರ್ಮಾ ಶೇರುಗಳು ಮುಖ್ಯವಾಗಿ ಕಾರಣವಾದವು.  ಟಾಟಾ ಸ್ಟೀಲ್‌, ಹಿಂಡಾಲ್ಕೊ ಶೇರುಗಳು ಶೇ.4ರಷ್ಟು ಏರಿದವು. 

ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,497 ಶೇರುಗಳು ಮುನ್ನಡೆ ಸಾಧಿಸಿದರೆ 1315 ಶೇರುಗಳು ಹಿನ್ನಡೆಗೆ ಗುರಿಯಾದವು. ಬಿಎಸ್‌ಇ ಮಿಡ್‌ ಕ್ಯಾಪ್‌ ಶೇ.1.25 ಹಾಗೂ ಸ್ಮಾಲ್‌ ಕ್ಯಾಪ್‌ ಶೇ.0.78ರ ಏರಿಕೆಯನ್ನು ಕಂಡವು. 

Advertisement

Udayavani is now on Telegram. Click here to join our channel and stay updated with the latest news.

Next