Advertisement
ಕಾರ್ಕಳ ಪೇಟೆ ಪುರಸಭೆ ವ್ಯಾಪ್ತಿಯ ರಾಘವೇಂದ್ರ ಮಠದ ಹಿಂಬದಿ 2ಜಿ ನೆಟ್‌ವರ್ಕ್ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂಟರ್‌ನೆಟ್ ಸೇವೆ ಪಡೆದುಕೊಂಡ ಹಲವಾರು ಮಂದಿ ಅಗತ್ಯ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯದೇ ಅನಿವಾರ್ಯವಾಗಿ ಇನ್ನೊಂದು ಸಂಸ್ಥೆಯತ್ತ ಮುಖಮಾಡುವಂತಾಗಿದೆ ಎನ್ನುತ್ತಾರೆ ಸ್ಥಳೀಯರು. ದೂರು ಕೊಟ್ಟರೆ ನಿರ್ವಹಣೆ ಏನೋ ಮಾಡುತ್ತಾರೋ, ಆದರೆ ಮೂಲ ಸಮಸ್ಯೆಜೀವಂತವಾಗಿರುತ್ತದೆ ಎಂಬುದು ನಾಗರಿಕರ ಅಳಲು.
ರಾಜ್ಯದ ವಿವಿಧ ತಾಲೂಕು ಮಟ್ಟದ ವಿವಿಧ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು ಬಿಎಸ್‌ಎನ್‌ಎಲ್ ಇಂಟರ್ನೆಟ್ ಸೇವೆ ಬಳಸುತ್ತಿದೆ. ವೇಗದ ಇಂಟರ್‌ನೆಟ್ ಇಲ್ಲದೆ ಕಚೇರಿ ಕೆಲಸ ಕಾರ್ಯಗಳಿಗೆ ವಿವಿಧ ತಂತ್ರಾಂಶ ಬಳಕೆ ಮಾಡಲು ತೊಡಕಾಗುತ್ತದೆ. ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆ, ಪಡಿತರ ತಿದ್ದುಪಡಿ ಸಹಿತ ಮೊದಲಾದ ಉದ್ದೇಶಗಳಿಗೆ ಸಾಕಷ್ಟು ಅಡ್ಡಿಯಾಗುತ್ತಿದೆ. 80 ಎಂಬಿಪಿಎಸ್ ಇಂಟರ್‌ನೆಟ್ ಡಾಟಾ ಸೇವೆ ಇದ್ದರೂ 40 ಎಂಬಿಪಿಎಸ್ ಡಾಟ ಸೌಲಭ್ಯ ಇಲ್ಲಿನ ಗ್ರಾಹಕರಿಗೆ ಸಿಗುತ್ತಿದೆ ಎಂಬುದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.
Related Articles
ಕಾರ್ಕಳ ಪುರಸಭೆ ಮತ್ತು ಪಟ್ಟಣ ಸುತ್ತಮುತ್ತಲಿರುವ ಗ್ರಾಹಕರಿಗೆ ಯುಪಿಐ ಸೇವೆ ಬಳಕೆ ಮಾಡಲು ತೊಡಕುಂಟಾಗುತ್ತಿದೆ. ಅಂಗಡಿ ಅಥವಾ ಇನ್ನಿತರೆ ಶಾಪಿಂಗ್, ವರ್ತಕರಲ್ಲಿ ಖರೀದಿ ಮಾಡುವ ವೇಳೆ, ಗೂಗಲ್ ಪೇ ಅಥವ ಇನ್ನಿತರ ಯುಪಿಐ ಪೇಮೆಂಟ್ ಮೂಲಕ ಹಣ ಪಾವತಿ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಕೆಲವು ಸಂದರ್ಭ ಹಣ ಪಾವತಿಯಾಗದೆ ಗೊಂದಲ ಉಂಟಾಗಲು ಕಾರಣವಾಗುತ್ತಿದೆ. ಬಹುತೇಕ ಮಂದಿ ಯುಪಿಐ ಪಾವತಿ ಪ್ರಕ್ರಿಯೆಯನ್ನೇ ಕೈಬಿಟ್ಟಿದ್ದಾರೆ.
Advertisement
ವ್ಯವಸ್ಥಿತ ಅಪ್‌ಗ್ರೇಡ್ ಅಗತ್ಯಹಳ್ಳಿಗಳಲ್ಲಿ ನೆಟ್‌ವರ್ಕ್ ಉತ್ತಮವಾಗಿದ್ದರೂ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಸಾಕಷ್ಟಿದೆ. ಅಂಗಡಿಗಳಲ್ಲಿ ಗೂಗಲ್ ಪೇ ಮಾಡಲು ಸಾಧ್ಯವಾಗುವುದಿಲ್ಲ. ಪ್ರಮುಖ ಉದ್ದೇಶಗಳನ್ನು ಮೊಬೈಲ್‌ನಲ್ಲಿ ಸುಲಲಿತವಾಗಿ ಚರ್ಚಿಸಲು ಸಾಧ್ಯವಾಗುದಿಲ್ಲ. ವಿವಿಧ ಅಗತ್ಯ ಕೆಲಸಗಳಿಗೆ ಇಂದು ನೆಟ್‌ವರ್ಕ್-ಇಂಟರ್‌ನೆಟ್ ಸೌಕರ್ಯ ಅಗತ್ಯವಾಗಿ ಬೇಕಿದೆ. ಬಿಎಸ್‌ಎನ್‌ಎಲ್ ಗ್ರಾಹಕರು ಸಾಕಷ್ಟು ಮಂದಿ ಇನ್ನೂ ಚಂದಾದಾರರು ಇದ್ದಾರೆ. ಇನ್ನಷ್ಟು ವ್ಯವಸ್ಥಿತವಾಗಿ ಅಪ್‌ಗೆÅàಡ್ ಮಾಡಿ ಉತ್ತಮ ಸೇವೆ ನೀಡಲು ಸರಕಾರ ಕ್ರಮ ತೆಗೆದುಕೊಳ್ಳಬೇಕಿದೆ.
-ಡಾ| ಅರುಣ್ ಕುಮಾರ್ ಎಸ್. ಆರ್. , ಕುಮ್ರಪದವು, ಕಾರ್ಕಳ ಹಲವು ಬಾರಿ ದೂರು
ಪೆರ್ವಾಜೆ, ಪತ್ತೂಂಜಿಕಟ್ಟೆ ಭಾಗದಲ್ಲಿ ನೆಟ್‌ವರ್ಕ್, ಇಂಟರ್‌ನೆಟ್ ಸಮಸ್ಯೆ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಇದಕ್ಕೆ ಸಂಬಂಧಪಟ್ಟವರು ಅಸಹಾಯಕರಾಗಿ ವರ್ತಿಸುತ್ತಾರೆ. ಟವರ್, ನೆಟ್‌ವರ್ಕ್ ನಿರ್ವಹಣೆಗೆ ಕಳಪೆ ಗುಣಮಟ್ಟದ ಪರಿಕರ, ಬ್ಯಾಟರಿಗಳು ಪೂರೈಕೆಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕು. ಬಿಎಸ್‌ಎನ್‌ಎಲ್ ಸೇವೆ ಸುಧಾರಣೆಗೆ ಜನಪ್ರತಿನಿಧಿಗಳು, ಸರಕಾರ ಈ ಬಗ್ಗೆ ಸೂಕ್ತ ಯೋಜನೆ ರೂಪಿಸಬೇಕು.
– ಸಂತೋಷ್ ಪೆರ್ವಾಜೆ, ಪತ್ತೂಂಜಿಕಟ್ಟೆ -ಅವಿನ್ ಶೆಟ್ಟಿ