Advertisement

ಕೇರಳದ ಬೀದಿ ನಾಯಿಗಳ ಪ್ರೀತಿಯಲ್ಲಿ ಬಿದ್ದ ಈ ಬ್ರಿಟನ್ ದಂಪತಿ, ತಮ್ಮೂರಿನ ದಾರಿಯನ್ನೇ ಮರೆತರು!

03:59 PM Apr 28, 2021 | Team Udayavani |

ಕೇರಳ : ಬೀದಿ ನಾಯಿಗಳ ಪ್ರೀತಿಗೆ ಕಟ್ಟು ಬಿದ್ದಂತಹ ಬ್ರಿಟನ್ ದಂಪತಿಗಳು ತಮ್ಮ ದೇಶಕ್ಕೆ ವಾಪಸ್ಸು ಹೋಗದೇ ಕೇರಳದಲ್ಲಿಯೇ ಉಳಿದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ. ಕಳೆದ 12 ವರ್ಷಗಳ ಹಿಂದೆ 2 ವಾರಗಳ ರಜೆ ಮೇರೆಗೆ ಕೇರಳಕ್ಕೆ ಪ್ರವಾಸ ಬಂದಿದ್ದ ಮೇರಿ ಮತ್ತು ಸ್ಟೀವ್ ಮಸ್ಕ್ರಾಫ್ಟ್ ಕೇರಳದ ಕೋವಲಂನ ಬೀದಿ ನಾಯಿಗಳಿಂದ ಆಕರ್ಷಿತರಾಗಿ ಭಾರತದಲ್ಲಿಯೇ ಉಳಿದಿದ್ದಾರೆ. ಕೇರಳಕ್ಕೆ ಬಂದ ವೇಳೆ ತಾವುಗಳು ಕೇವಲ ಎರಡು ನಾಯಿಗಳನ್ನು ಸಾಕಿದ್ದು, ಇಂದು ಅವುಗಳ ಸಂಖ್ಯೆ 140ಕ್ಕೆ ಏರಿದೆ ಎಂದು ಈ ಬ್ರಿಟಿಷ್ ದಂಪತಿ ಹೇಳುತ್ತಾರೆ.

Advertisement

ಸದ್ಯ ಅವರು ಸಾಕಿರುವ 140 ನಾಯಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಬೀದಿ ನಾಯಿಗಳಿಗೆ ಆಹಾರ ಸೇರಿದಂತೆ ಅವುಗಳ ಯೋಗಕ್ಷೇಮದ ಜವಾಬ್ದಾರಿಯನ್ನು ಈ ದಂಪತಿ ಹೊತ್ತಿದೆ. ವಿಶೇಷ ಅಂದರೆ ಮೇರಿ ಮತ್ತು ಸ್ಟೀವ್ ಮಸ್ಕ್ರಾಫ್ಟ್ ಅವರು ತಮ್ಮ ಬ್ರಿಟನ್ ದೇಶಕ್ಕೆ ಹೋಗಲು ಕಳೆದ 12 ವರ್ಷಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದರಂತೆ. ಆದ್ರೆ ನಾಯಿಗಳ ಪ್ರೀತಿ ಅವರುಗಳನ್ನು ಇಲ್ಲಿಯೇ ಇರುವಂತೆ ಮಾಡಿರುವುದಾಗಿ ವಿದೇಶಿ ದಂಪತಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಕಳೆದ ಹಲವಾರು ವರ್ಷಗಳಿಂದ ನಮಗೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತಿದೆ. ಇದೀಗ ನಮ್ಮಲ್ಲಿ 140 ನಾಯಿಗಳಿವೆ, ಅವುಗಳನ್ನು ವಿವಿಧ ಸ್ಥಳಗಳಿಂದ ತಂದು ಸಾಕುತ್ತಿದ್ದೇವೆ ಎಂದು ಮೇರಿ ಹೇಳಿದ್ದಾರೆ. ಈ ದಂಪತಿಗಳ ಉದಾತ್ತ ಕಾರ್ಯವು ಇನ್ನೂ ಮುಂದುವರೆದಿದೆ. ಇವರು ‘ಸ್ಟ್ರೀಟ್ ಡಾಗ್ ವಾಚ್’ ಎಂಬ NGO ಅನ್ನು ಪ್ರಾರಂಭಿಸಿದ್ದಾರೆ. ಅದರ ಅಡಿಯಲ್ಲಿ ತಮ್ಮ ಪ್ರದೇಶದಲ್ಲಿ ನಾಯಿಗಳನ್ನು ರಕ್ಷಿಸುವುದು ಮತ್ತು ಆ ನಾಯಿಗಳ ಆರೋಗ್ಯ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next