Advertisement

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

08:12 PM Nov 24, 2024 | Team Udayavani |

ಹೊಸದಿಲ್ಲಿ : ಸಂಸತ್ತಿನ ಚಳಿಗಾಲದ ಅಧಿವೇಶನದ ಸೋಮವಾರದಿಂದ (ನವೆಂಬರ್ 25) ಆರಂಭವಾಗಲಿದೆ. ಮುನ್ನಾದಿನ ಸಾಂಪ್ರದಾಯಿಕ ಸರ್ವಪಕ್ಷ ಸಭೆ ಭಾನುವಾರ(ನ24)ನಡೆಯಿತು.

Advertisement

ಸಭೆಯ ನಂತರ, ಸಂಸದೀಯ ವ್ಯವಹಾರಗಳ ಸಚಿವ ರಿಜಿಜು ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುಗಮ ಕಲಾಪವನ್ನು ಖಚಿತಪಡಿಸಿಕೊಳ್ಳಲು ಸರಕಾರವು ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದೆ ಎಂದು ಹೇಳಿದರು.

ಅದಾನಿ ಗ್ರೂಪ್ ವಿರುದ್ಧದ ಯುಎಸ್ ಪ್ರಾಸಿಕ್ಯೂಟರ್‌ಗಳ ಲಂಚದ ಆರೋಪಗಳ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಕೇಳಿದೆ.

ಉಭಯ ಸದನಗಳಲ್ಲಿ ಕೈಗೊಳ್ಳಬೇಕಾದ ವಿಷಯಗಳನ್ನು ಆಯಾ ಸಭಾಧ್ಯಕ್ಷರ ಒಪ್ಪಿಗೆಯೊಂದಿಗೆ ಅವರ ಅಧಿಕೃತ ಸಮಿತಿಗಳು ನಿರ್ಧರಿಸುತ್ತವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ.

Advertisement

ಬಿಜೆಪಿಯ ಹಿರಿಯ ನಾಯಕ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 30 ಪಕ್ಷಗಳ ನಲವತ್ತೆರಡು ನಾಯಕರು ಭಾಗವಹಿಸಿದ್ದರು.

ಮೋದಿ ಸರಕಾರವು ಐದು ಹೊಸ ಶಾಸನಗಳನ್ನು ಒಳಗೊಂಡಂತೆ, ವಕ್ಫ್ (ತಿದ್ದುಪಡಿ) ಮಸೂದೆ ಸೇರಿ 15 ಮಸೂದೆಗಳನ್ನು ಪರಿಚಯಿಸಲು ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next