ನವದೆಹಲಿ: ನಿರಂತರವಾಗಿ ಹಳದಿ ಲೋಹದ ಬೆಲೆ ಗಗನಕ್ಕೇರುತ್ತಿರುವುದು ಚಿನ್ನ ಖರೀದಿದಾರರಿಗೆ ಆತಂಕ ಮೂಡಿಸಿತ್ತು. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಡಾಲರ್ ಬೆಲೆ ಏರಿಕೆಯಾಗುತ್ತಿದ್ದರೆ, ಚಿನ್ನದ ಬೆಲೆ ಗಣನೀಯ ಇಳಿಕೆ ಕಾಣುತ್ತಿದೆ. ಆದರೆ ಶುಕ್ರವಾರ ಚಿನ್ನದ ಬೆಲೆ ಅಲ್ಪ ಏರಿಕೆ ಕಂಡಿದೆ.
ಶುಕ್ರವಾರ (ನ.08) ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 7,285 ರೂಪಾಯಿ, 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 7,947 ರೂಪಾಯಿ, 18 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 5,961 ರೂಪಾಯಿಗೆ ಇಳಿಕೆಯಾಗಿದೆ.
ಇಂದಿನ ಮಾರುಕಟ್ಟೆ ಧಾರಣೆ ಪ್ರಕಾರ 22 ಕ್ಯಾರೆಟ್ ನ ಒಂದು ಪವನ್( 8ಗ್ರಾಂ) ಚಿನ್ನದ ಬೆಲೆ 58,280 ರೂಪಾಯಿ, ಗುರುವಾರ 8 ಗ್ರಾಂಗೆ 57, 600 ರೂಪಾಯಿಗೆ ಇಳಿಕೆಯಾಗಿತ್ತು. ಇಂದು ಗ್ರಾಂಗೆ 680 ರೂ. ಹೆಚ್ಚಳವಾಗಿದೆ.
ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 72, 850 ರೂಪಾಯಿಯಾಗಿದ್ದು, ಗುರುವಾರ 10 ಗ್ರಾಂಗೆ 72,000 ಸಾವಿರ ರೂ. ಇದ್ದಿದ್ದು, ಇಂದು 850 ರೂ. ಹೆಚ್ಚಳವಾಗಿದೆ.
24 ಕ್ಯಾರೆಟ್ ನ 8 ಗ್ರಾಂ ಚಿನ್ನದ ಬೆಲೆ 63, 576 ರೂಪಾಯಿ, ಗುರುವಾರ 62,848 ರೂಪಾಯಿಗೆ ಇಳಿಕೆಯಾಗಿತ್ತು. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 79, 470 ರೂಪಾಯಿ, ಗುರುವಾರ ಈ ಬೆಲೆ 78, 560 ರೂ. ಇಳಿಕೆಯಾಗಿತ್ತು.
18 ಕ್ಯಾರೆಟ್ ನ 8 ಗ್ರಾಂ ಚಿನ್ನದ ಬೆಲೆ 47, 688 ರೂಪಾಯಿ, ಗುರುವಾರ ಈ ಬೆಲೆ 47, 128 ರೂಪಾಯಿಗೆ ಇಳಿಕೆ ಕಂಡಿತ್ತು. 10 ಗ್ರಾಂ ಚಿನ್ನದ ಬೆಲೆ 59, 610 ರೂಪಾಯಿ, ಗುರುವಾರ ಈ ಬೆಲೆ 58, 910 ರೂ.ಗೆ ಇಳಿದಿತ್ತು.
ನವೆಂಬರ್ 6ರವರೆಗೆ ಒಂದು ಗ್ರಾಂ 22 ಕ್ಯಾರೆಟ್ ನ ಚಿನ್ನದ ಬೆಲೆ 7,365 ರೂಪಾಯಿ ಇದ್ದಿದ್ದು, 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 8,035 ರೂಪಾಯಿಯಾಗಿತ್ತು.