Advertisement

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

12:33 AM Nov 23, 2024 | Team Udayavani |

ತಿರುವನಂತಪುರ: 2017ರಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಮತ್ತವರ ಬೆಂಗಾವಲು ಪಡೆಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಮೂವರು ವ್ಯಕ್ತಿಗಳ ವಿರುದ್ಧದ ಪ್ರಕರಣಗಳನ್ನು ಕೇರಳ ಹೈಕೋರ್ಟ್‌ ರದ್ದುಪಡಿಸಿದೆ.

Advertisement

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, “ಕಪ್ಪು ಬಾವುಟ ಪ್ರದರ್ಶನವು ಪ್ರತಿಭಟನೆಯ ಒಂದು ಭಾಗವಾಗಿದೆ. ಇದಕ್ಕೆ ಕಾನೂನು ಕೂಡ ಯಾವುದೇ ನಿಷೇಧ ಹೇರಿಲ್ಲ. ಆದ್ದರಿಂದ ಈ ಪ್ರಕರಣ ಮಾನ ಹಾನಿಕರ ಎನ್ನಲು ಸಾಧ್ಯವಿಲ್ಲ’ ಎಂದಿದೆ.

ಅಲ್ಲದೇ ಪ್ರತಿಭಟ ನೆಯ ಸಂದರ್ಭದಲ್ಲಿ ಪ್ರತಿಭಟನಕಾರರು ಬೆಂಗಾವಲು ಪಡೆಗೆ ಅಡಚಣೆ ಉಂಟು ಮಾಡಿದ್ದಾರೆ ಎಂಬ ಪ್ರಕರಣವನ್ನೂ ಸಾಕ್ಷ್ಯಾಧಾರಗಳ ಕೊರತೆಯ ಕಾರಣ ವಜಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next