ಮುಂಬಯಿ : ಜಗತ್ತಿನ ಹೆಚ್ಚಿನ ಶೇರು ಮಾರುಕಟ್ಟೆಗಳಲ್ಲಿ ಇಂದು ದುರ್ಬಲ ಟ್ರೆಂಡ್ ತೋರಿಬಂದ ಹೊರತಾಗಿಯೂ ಸಾಕಷ್ಟು ತೇಜಿ ಕಂಡ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ವಹಿವಾಟನ್ನು 212.61 ಅಂಕಗಳ ಏರಿಕೆಯೊಂದಿಗೆ 29,788.35 ಅಂಕಗಳ ಮಟ್ಟಕ್ಕೆ ತಲುಪಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 55.55 ಅಂಕಗಳ ಏರಿಕೆಯೊಂದಿಗೆ 9,237 ಅಂಕಗಳ ಮಟ್ಟವನ್ನು ತಲುಪಿ ದಿನದ ವಹಿವಾಟವನ್ನು ವಿಶ್ವಾಸಭರಿತವಾಗಿ ಕೊನೆಗೊಳಿಸಿತು.
ಇಂದು ನಷ್ಟಕ್ಕೆ ಗುರಿಯಾದ ಪ್ರಮುಖ ಶೇರುಗಳೆಂದರೆ ಐಟಿಸಿ, ಐಸಿಐಸಿಐ ಬ್ಯಾಂಕ್, ಇನ್‌ಫೋಸಿಸ್ ಮತ್ತು ಎಲ್ ಆ್ಯಂಡ್ ಟಿ.
ಇಂದು 1,724 ಶೇರುಗಳು ಮುನ್ನಡೆ ಕಂಡರೆ 1,153 ಶೇರುಗಳು ಮುಗ್ಗರಿಸಿದವು. 144 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಬಿಎಸ್‌ಇ ಇಂದು ದಾಖಲಿಸಿದ ಒಟ್ಟಾರೆ ಮಾರುಕಟ್ಟೆ ವಹಿವಾಟು 3,611.45 ಕೋಟಿ . ನಿನ್ನೆಯ ದಿನ ಇದು 4,013.81 ಕೋಟಿ ಆಗಿತ್ತು.