Advertisement

ಜೋಡೋ ಯಾತ್ರೆಯಲ್ಲಿ”ನಗರ ನಕಲರು’: ಮಹಾರಾಷ್ಟ್ರ ಸಿಎಂ ಫ‌ಡ್ನವೀಸ್‌

11:15 AM Dec 21, 2024 | Team Udayavani |

ಮುಂಬಯಿ: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯಲ್ಲಿ “ನಗರ ನಕ್ಸಲರ’ ಸಂಘಟನೆಗಳು ಪಾಲ್ಗೊಂಡಿದ್ದವು. ನೇಪಾಲದಲ್ಲಿ ಸಭೆ ನಡೆಸಿದ ಈ ಸಂಘಟನೆಗಳು ಬಿಜೆಪಿ ನೇತೃತ್ವದ ಸರಕಾರಗಳನ್ನು ಅಸ್ಥಿರಗೊಳಿಸುವ ಸಂಚು ರೂಪಿಸಿದ್ದವೆಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

Advertisement

ಈ ಆರೋಪವನ್ನು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಾನಾ ಪಟೋಲೆ ತಿರಸ್ಕರಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಂದಿರು ವಂತೆಯೇ ನ.15ರಂದು ಕಠ್ಮಂಡುವಿನಲ್ಲಿ ಸಭೆ ನಡೆಸಿದ ಈ ಸಂಘಟನೆಗಳು, ಮುಂಬಯಿಯಲ್ಲಿ ಅರಾಜಕತೆ ಸೃಷ್ಟಿಸುವ ಸಂಚು ರೂಪಿಸಿದ್ದವು ಎಂದು ಫ‌ಡ್ನವೀಸ್‌ ಹೇಳಿದ್ದಾರೆ.

ಚುನಾವಣೆಗೆ ಉಗ್ರರ ಹಣ ಬಳಕೆ ಕುರಿತು ಉಗ್ರ ನಿಗ್ರಹ ಪಡೆ ತನಿಖೆ ನಡೆಸುತ್ತಿದೆ. ಈ ಬಗ್ಗೆ ಸಾಕ್ಷ್ಯಗಳಿವೆ ಎಂದಿದ್ದಾರೆ.

ಆಧಾರ ರಹಿತ ಆರೋಪ-ಕಾಂಗ್ರೆಸ್‌:
ಸಿಎಂ ಫ‌ಡ್ನವೀಸ್‌ ಆರೋಪವು ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತವಾಗಿದೆ. ಭಾರೀ ಪ್ರಮಾಣ ದ ಜನಬೆಂಬಲ ಪಡೆದ ಯಾತ್ರೆಗೆ ಮಸಿ ಬಳಿಯುವ ಯತ್ನ. ರಾಜ್ಯದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ನಾನಾ ಪಟೋಲೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next