ನವದೆಹಲಿ: ಈ ಚಳಿಗಾಲದ ಋತುವಿನಲ್ಲಿ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯಕ್ಕಿಂತ 5 ಡಿಗ್ರಿಗಳಷ್ಟು ಕಡಿಮೆಯಾದ ಕನಿಷ್ಠ ತಾಪಮಾನ ದಾಖಲಾಗಿದೆ. 4.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ದೆಹಲಿಯು ಬುಧವಾರ ಬೆಳಗ್ಗೆ ಅತ್ಯಂತ ಶೀತ ವಾತಾವರಣಕ್ಕೆ ಸಾಕ್ಷಿಯಾಯಿತು.
ಕಳೆದ 24 ಗಂಟೆಗಳಲ್ಲಿ ತಾಪಮಾನವು ಕನಿಷ್ಠ 3 ಡಿಗ್ರಿಗಳಷ್ಟು ಕಡಿಮೆಯಾಗಿದೆ. ನಗರದ ಪ್ರಮುಖ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ 4.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಾಲಂನಲ್ಲಿ ಕನಿಷ್ಠ ತಾಪಮಾನ 6.2, 1.2 ಹಂತಗಳ ಕುಸಿತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಬೆಳಗ್ಗೆ 5.30ರ ವೇಳೆಗೆ ನಗರದಲ್ಲಿ ಒಟ್ಟಾರೆ ತಾಪಮಾನ 5.6 ಡಿಗ್ರಿ ಸೆಲ್ಸಿಯಸ್ ಇತ್ತು. ಮಂಗಳವಾರ ಕನಿಷ್ಠ ತಾಪಮಾನ 8 ಡಿಗ್ರಿ ದಾಖಲಾಗಿತ್ತು.
ಗುರುವಾರದ ವೇಳೆಗೆ ರಾಷ್ಟ್ರ ರಾಜಧಾನಿ ಮಾತ್ರವಲ್ಲದೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲೂ ತೀವ್ರ ಚಳಿ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಭಾರತದ ಭಾಗಗಳಲ್ಲಿ ದಟ್ಟ ಮಂಜು ಅವರಿಸುತ್ತಿದ್ದು ಸಂಭಾವ್ಯವಾಗಿ ಗೋಚರತೆಯನ್ನು ಕಡಿಮೆ ಮಾಡುತ್ತಿದೆ . ಸಾರಿಗೆಯ ಮೇಲೆ ಪರಿಣಾಮ ಬೀರುತ್ತಿದೆ.
ಇದೆ ವೇಳೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ‘ಕಳಪೆ’ ಮಟ್ಟದಲ್ಲೇ ಉಳಿದಿದೆ.