Advertisement

ಕೊಚ್ಚಿ ಶಿಪ್‌ಯಾರ್ಡ್‌ನಲ್ಲಿ ಭೀಕರ ಸ್ಫೋಟ;5 ಬಲಿ,ಹಲವರಿಗೆ ಗಾಯ 

12:22 PM Feb 13, 2018 | Team Udayavani |

ಕೊಚ್ಚಿ: ಇಲ್ಲಿನ ಶಿಪ್‌ಯಾರ್ಡ್‌ನಲ್ಲಿ  ಮಂಗಳವಾರ ಭೀಕರ ಅವಘಡವೊಂದು ಸಂಭವಿಸಿದ್ದು , ಐವರು ದಾರುಣವಾಗಿ ಸಾವನ್ನಪ್ಪಿ 11ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಓಎನ್‌ಜಿಸಿಯ ಕಡಲಾಚೆಯ ಡ್ರಿಲ್ಲಿಂಗ್‌ ಘಟಕದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವ ವೇಳೆ ನೀರಿನ ಟ್ಯಾಂಕ್‌ ಸ್ಫೋಟಗೊಂಡು ಅವಘಡ ಸಂಭವಸಿದೆ ಎಂದು ವರದಿಯಾಗಿದೆ.

ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಇಬ್ಬರು ಅಪಾಯಕ್ಕೆ ಸಿಲುಕಿಕೊಂಡಿರುವ ಬಗ್ಗೆ ವರದಿಯಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next