Advertisement

ಪಂಚರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ : ವರುಣ್ ಗಾಂಧಿ ಟ್ವೀಟ್ ಸ್ಫೋಟ

01:06 PM Jan 20, 2022 | Team Udayavani |

ನವದೆಹಲಿ: ಬಿಜೆಪಿ ಹೈಕಮಾಂಡ್ ವಿರುದ್ಧ ಆಗಾಗ ಟೀಕಾಸ್ತ್ರ ಪ್ರಯೋಗಿಸುತ್ತಲೇ ಇರುವ ಸಂಸದ ವರುಣ್ ಗಾಂಧಿ ಪಂಚರಾಜ್ಯಗಳ ಚುನಾವಣೆ ಹೊಸ್ತಿಲಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಮಾಡಿರುವ ಟ್ವೀಟ್ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

Advertisement

ರಾಷ್ಟ್ರೀ ಯ ದೈನಿಕವೊಂದಕ್ಕೆ ತಾವು ಬರೆದ ಲೇಖನವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ವರುಣ್ ಗಾಂಧಿ “ ಅಭಿವೃದ್ಧಿಯ ಕುರಿತಾಗಿನ ಎಲ್ಲ ಚರ್ಚೆಗಳ ಹೊರತಾಗಿಯೂ ಚುನಾವಣೆಯ ಹೊಸ್ತಿಲಲ್ಲಿ ಇರುವ ಪಂಚರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ವಿಪರೀತವಾಗಿದೆ ಎಂದು ಅಂಕಿಸಂಖ್ಯೆಗಳು ಹೇಳುತ್ತಿರುವುದು ಸುಳ್ಳಲ್ಲ’’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರುಣ್ ಗಾಂಧಿಯವರ ಈ ಅನಿಸಿಕೆ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ. “ರಾಜಕೀಯ ಜನಪ್ರಿಯತೆಯ ಗಳಿಕೆಯ ಜತೆಗೆ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವುದು ಈ ಕ್ಷಣದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರಗಳು ಗಮನ ಹರಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ತಮ್ಮ ಸ್ವಕ್ಷೇತ್ರ ಪಿಲ್‌ಬಿತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇಶದಲ್ಲಿ ಹಣದುಬ್ಬರದ ದರ ಆಕಾಶ ತಲುಪುತ್ತಿದೆ. ನಿರುದ್ಯೋಗ ಸಮಸ್ಯೆ ಅಂಕೆ ಮೀರಿದೆ ಎಂದು ವರುಣ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next