Advertisement

ದೇಶ್ ಮುಖ್ ವಸೂಲಿ ಪ್ರಕರಣ : ರಾಜ್ಯಪಾಲರನ್ನು ಭೇಟಿ ಮಾಡಿದ ಫಡ್ನವಿಸ್

01:57 PM Mar 24, 2021 | Team Udayavani |

ಮುಂಬೈ : ಮಹಾರಾಷ್ಟ್ರ ಸರ್ಕಾರದ ಗೃಹ ಮಂತ್ರಿ ಅನಿಲ್ ದೇಶ್ ಮುಖ್ ಅವರ ಭ್ರಷ್ಟಾಚಾರದ ವಿಚಾರ ಭಾರಿ ಚರ್ಚೆಗೆ ಒಳಗಾಗುತ್ತಿರುವ ನಡುವೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಬಿಜೆಪಿಯ ಪ್ರಮುಖ ನಾಯಕರು ಮಹಾರಾಷ್ಟ್ರದ ರಾಜ್ಯಪಾಲರನ್ನು ಇಂದು ಭೇಟಿಯಾಗಿದ್ದಾರೆ.

Advertisement

ಫಡ್ನವಿಸ್ ಅವರೊಂದಿಗೆ ಬಿಜೆಪಿ ಹಿರಿಯ ನಾಯಕ ಸುಧೀರ್ ಮುಂಘಾಂತಿವಾರ್ ಹಾಗೂ ಮಹರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸಾಥ್ ಕೊಟ್ಟಿದ್ದರು.

ಓದಿ : ಏಪ್ರಿಲ್ 1 ರಿಂದ ಬದಲಾಗಲಿದೆ ಇನ್ ಕಮ್ ಟ್ಯಾಕ್ಸ್ ನ ಹಲವು ನಿಯಮಗಳು.! ಇಲ್ಲಿದೆ ಮಾಹಿತಿ

ಗೃಹ ಸಚಿವ ಅನಿಲ್ ದೆಶ್ ಮುಖ್ ಅವರ ವಿರುದ್ಧ ಆರೋಪಗಳ ಆಧಾರದ ಮೇಲೆ ರಾಜ್ಯಪಾಲರು ರಾಷ್ಟ್ರಪತಿಗೆ ವರದಿ ಕಳುಹಿಸಬೇಕೆಂದು ಮನವಿ ಮಾಡಿದೆ. ಬಿಜೆಪಿ ಮಾಡಿದ ಮನವಿಯ ಹಿನ್ನಲೆಯಲ್ಲಿ  ರಾಜ್ಯಪಾಲರು ಪ್ರಧಾನ ಕಾರ್ಯದರ್ಶಿಯವರಲ್ಲಿ ವರದಿ ಕೇಳುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಅನಿಲ್ ದೇಶ್ ಮುಖ್ ಅವರ ಈ ವಸೂಲಿ ಭ್ರಷ್ಟಾಚಾರದ ಆರೋಪ ಆಡಳಿತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪೊಲೀಸರ ವರ್ಗಾವಣೆಯ ಕೆಲಸದಲ್ಲಿ ಈ ರೀತಿಯ ಸುಲಿಗೆ ದಂಧೆ ನಡೆಯುತ್ತಿದೆಯೇ..? ಮುಖ್ಯಮಂತ್ರಿ ಈ ಬಗ್ಗೆ ಮೌನ ತಾಳಿದ್ದಾರೆ. ಅವರು ಈ ಬಗ್ಗೆ ತುಟಿ ಬಿಚ್ಚಲೇ ಇಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.

Advertisement

ಶರದ್ ಪವಾರ್ ಈ ಬಗ್ಗೆ ಎರಡು ಪತ್ರಿಕಾಗೋಷ್ಟಿಗಳನ್ನು ನಡೆಸಿದ್ದಾರೆ. ಅನಿಲ್ ದೇಶ್ ಮುಖ್ ಅವರನ್ನು ಪವಾರ್ ರಕ್ಷಣೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನ ನಿಲುವು ಏನು ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್ ಬೇರೆಲ್ಲಾ ವಿಚಾರಗಳಿಗೆ ಧ್ವನಿ ಎತ್ತುತ್ತದೆ. ಈ ಬಗ್ಗೆ ಮಾತಾಡಿಲ್ಲ. ಇದು ಮಹಾರಾಷ್ಟ್ರ ವಿಕಾಸ್ ಅಘಾಡಿನಾ ಅಥವಾ ಮಹಾರಾಷ್ಟ್ರ ವಸೂಲಿ ಅಘಾಡಿನಾ..? ಎಂದು ನಮಗೆ ಗೊತ್ತಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಮಾತಾಡದಿದ್ದರೇ, ರಾಜ್ಯಪಾಲರು ಈ ಬಗ್ಗೆ ಕೇಳಬಹದು. ಕನಿಷ್ಠ ಪಕ್ಷ ವರದಿಯನ್ನಾದರೂ ಪಡೆಯಬಹುದು ಎಂದು ಫಡ್ನವಿಸ್ ಆಕ್ರೋಶ ಹೊರ ಹಾಕಿದ್ದಾರೆ.

ಆದರೇ, ಮಹಾರಾಷ್ಟ್ರ ಸರ್ಕಾರ, ಫಡ್ನವಿಸ್ ಅವರ ಆರೋಪಗಳನ್ನು ನಿರಾಕರಿಸದೆ.

ಓದಿ : ಮುಂಬಯಿ ಮಹಾನಗರ ಪಾಲಿಕೆ : 1 ಮಿಲಿಯನ್‌ ಯುನಿಟ್‌ ಕೋವ್ಯಾಕ್ಸಿನ್‌ಗೆ ಬೇಡಿಕೆ

Advertisement

Udayavani is now on Telegram. Click here to join our channel and stay updated with the latest news.

Next