Advertisement

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

04:17 AM Dec 24, 2024 | Team Udayavani |

ಬೆಂಗಳೂರು: ನನ್ನ ಇಲಾಖೆಯಲ್ಲಿ ಬೇರೆ ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ. ಹಸ್ತಕ್ಷೇಪ ಆದರೂ ಅಧಿಕಾರಿಗಳು ಕೇಳುವುದಿಲ್ಲ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿ.ಟಿ. ರವಿ ಪ್ರಕರಣದಲ್ಲಿ ಯಾರೂ ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಧಿಕಾರಿಗಳು ಸಿಎಂ ಹಾಗೂ ಗೃಹ ಸಚಿವರ ಮಾತು ಮಾತ್ರ ಕೇಳುತ್ತಾರೆ. ಬೇರೆ ಘಟನೆಗಳಲ್ಲಿ ಮಾತ್ರ ಬೇರೆ ಸಚಿವರ ಮಾತು ಕೇಳುತ್ತಾರೆ. ಇಂತಹ ಘಟನೆಗಳಲ್ಲಿ ಪೊಲೀಸರು ಮಾತು ಕೇಳಲ್ಲ. ಎಲ್ಲದಕ್ಕೂ ಪೊಲೀಸರು ಉತ್ತರ ಕೊಡಬೇಕಲ್ಲವೇ? ಪೊಲೀಸರಿಗೂ ಈ ವಿಚಾರ ಗೊತ್ತಿದೆ ಎಂದರು.

ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವೆ ಹೆಬ್ಬಾಳ್ಕರ್‌ ಡೈರೆಕ್ಷನ್‌ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಲಕ್ಷ್ಮೀ ಅವರ ಮೇಲೆ ಘಟನೆ ನಡೆದಿದೆ. ಆಗ ಶಿವಕುಮಾರ್‌ ಸದನದಲ್ಲಿ ಇದ್ದರು. ಡಿಸಿಎಂ ಹೆಚ್ಚು ಮಾತನಾಡಿರಬಹುದು. ಬೇರೆ ಯಾವುದೇ ಮಾಹಿತಿ ಇಲ್ಲ. ತಡರಾತ್ರಿ ಡೈರೆಕ್ಷನ್‌ ಕೊಟ್ಟ ಬಗ್ಗೆ ಮಾಹಿತಿ ಇಲ್ಲ. ನೇರವಾಗಿ ಆರೋಪ ಮಾಡಲಿ. ನಾನು ಪ್ರತಿಕ್ರಿಯೆ ಕೊಡುತ್ತೇನೆ. ಡಿ.ಕೆ. ಶಿವಕುಮಾರ್‌ ಡೈರೆಕ್ಷನ್‌ ಕೊಟ್ಟ ಬಗ್ಗೆ ಪರಿಶೀಲಿಸುತ್ತೇನೆ. ಕಾಣದ ಕೈಗಳು ಪರಿಸ್ಥಿತಿಯನ್ನು ನಿಭಾಯಿಸಿವೆ ಎಂದು ಯಾರು ಹೇಳಿದರು? ಇದರಲ್ಲಿ ಸಿಕ್ರೆಟ್‌ ಏನಿದೆ? ಸಚಿವರು ಅಂತಾ ಹೇಳಿದ್ದಾರೆ. ಯಾವ ಸಚಿವರು ಅಂತಾ ಹೇಳಲಿ ಎಂದರು.

ಸದನದ ವೀಡಿಯೋ ವಿಚಾರ ಸಭಾಪತಿಗಳೇ ಪರಿಶೀಲಿಸಬಹುದು. ಎಫ್ಎಸ್‌ಎಲ್‌ಗೆ ಕೊಟ್ಟು ಪರಿಶೀಲಿಸುತ್ತೇವೆ. ಪೊಲೀಸರು ಅವರ ಚೌಕಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಎಲ್ಲ ವಿಷಯಗಳನ್ನು ಪೊಲೀಸರು ಹೇಳಬೇಕಿಲ್ಲ. ಡಿಜಿಪಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಇರುತ್ತಾರೆ. ಅವರ ಬಳಿ ಸಲಹೆ ಪಡೆಯಬಹುದು. ಸ್ಥಳದಲ್ಲೇ ನಿರ್ಧಾರ ಮಾಡಲಿದ್ದಾರೆ. ಬಳಿಕ ಸರಕಾರಕ್ಕೆ ವರದಿ ನೀಡಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next