Advertisement
ದ.ಕ. ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಪರ ಮತಯಾಚನೆಗೆ ಆಗ ಮಿಸಿದ ಅವರು ಉಜಿರೆ ಎಸ್‌ಡಿಎಂ. ಕಾಲೇಜು ಬಳಿಯಿಂದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದವರೆಗೆ ಹಮ್ಮಿಕೊಂಡ ಬೃಹತ್ ರೋಡ್ ಶೋ ದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಸುರಕ್ಷೆಯ ದೃಷ್ಟಿಯಿಂದ, ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದಲ್ಲಿ ಮತ್ತೂಮ್ಮೆ ಪ್ರಧಾನಿ ಮೋದಿ ಯವರ ಸಾರಥ್ಯದ ಎನ್‌ಡಿಎ ಕೂಟ ಬೇಕು ಎಂಬ ಗುಡು ಗು ಪ್ರತೀ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಮಾಡುತ್ತಿದ್ದಾರೆ. ಮೋದಿಜಿಯವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ಯಾವುದೇ ದುಷ್ಟ ಶಕ್ತಿಗಳು ತಡೆಯಲು ಸಾಧ್ಯವಿಲ್ಲ. ದ.ಕ. ಜಿಲ್ಲೆಯ ಕಾರ್ಯಕರ್ತರ ಉತ್ಸಾಹ ನೋಡಿದರೆ 3 ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ಗೆಲುವು ಖಚಿತ. ಪ್ರತಿಯೊಬ್ಬರು ನೀಡುವ ಒಂದೊಂದು ಮತವೂ ದೇಶ ರಕ್ಷಣೆಗೆ ನೀಡುವ ಮತ ಎಂದು ಜನರಿಗೆ ತಿಳಿಸಬೇಕು ಎಂದರು.
Related Articles
Advertisement
ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್, ಎಸ್.ಎಲ್. ಭೋಜೇಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ತಿಲಕ್ ರಾಜ್, ಜಯಂತ್ ಕೋಟ್ಯಾನ್, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಚುನಾವಣ ಪ್ರಭಾರಿ ಹರಿಕೃಷ್ಣ ಬಂಟ್ವಾಳ್, ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಮತ್ತು ಜಿಲ್ಲಾ, ತಾಲೂಕಿನ ಪ್ರಮುಖ ಮುಖಂಡರು, ಸಾವಿರಾರು ಕಾರ್ಯಕರ್ತರು ರೋಡ್ ಶೋದಲ್ಲಿ ಭಾಗವಹಿಸಿದರು.
ದೇಶದ ಭವಿಷ್ಯದ ಚುನಾವಣೆ: ಕ್ಯಾ| ಚೌಟಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಈ ಚುನಾವಣೆ ದೇಶದ ಭವಿಷ್ಯದ ಚುನಾವಣೆ. ಎಲ್ಲ ಕಾರ್ಯಕರ್ತರು ಇನ್ನು ಐದು ದಿನ ಬಿಜೆಪಿ ಬಗ್ಗೆ, ಪ್ರಧಾನಿ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗುವ ಬಗ್ಗೆ ಮಾತನಾಡಬೇಕು. ಆ ಮೂಲಕ ಮತ್ತೂಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು. ವಿಜಯೇಂದ್ರ ಮುಂದಿನ ಸಿಎಂ: ಪೂಂಜ
ಈ ಬಾರಿಯ ಚುನಾವಣೆ ಹಿಂದುತ್ವದ ಚುನಾವಣೆ, ಪ್ರಭು ಶ್ರೀರಾಮಚಂದ್ರನ ಚುನಾವಣೆ, ಪ್ರತಿಯೊಂದು ಮತವೂ ಶ್ರೀರಾಮನಿಗೆ ಕೊಡುವ ಮತವಾಗಿದ್ದು, ರಾಷ್ಟ್ರ ರಕ್ಷಣೆಯ ಚುನಾವಣೆಯಾಗಿದೆ. ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಬಿ.ವೈ. ವಿಜಯೇಂದ್ರರಿಗೆ ಮುಂದಿನ ಮುಖ್ಯ ಮಂತ್ರಿಯಾಗುವ ಭಾಗ್ಯ ಕರುಣಿಸೋಣ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.