Advertisement

BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫ‌ಲ: ವಿಜಯೇಂದ್ರ ಮೇಲೂ ಪರಿಣಾಮ?

12:57 AM Nov 24, 2024 | Team Udayavani |

ಬೆಂಗಳೂರು: ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಹಿಂದೆಂದೂ ಕಾಣದ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಂಘಟಿತ ಹಾಗೂ ಯೋಜನಾ ಬದ್ಧ ತಂತ್ರಗಾರಿಕೆ ನಡೆಸುವಲ್ಲಿ ಬಿಜೆಪಿ ರಾಜ್ಯ ಘಟಕ ಸಂಪೂರ್ಣ ವಿಫ‌ಲವಾಗಿದ್ದು, ನಾಯಕತ್ವದ ಬಗ್ಗೆ ಪಕ್ಷದ ಆಂತರಿಕ ಹಾಗೂ ಬಾಹ್ಯ ವಲಯದಲ್ಲಿ ಭಾರಿ ಪ್ರಶ್ನೆಗಳು ಸೃಷ್ಟಿಯಾಗಿವೆ.

Advertisement

ಈ ಚುನಾವಣೆ ಕುಟುಂಬ ರಾಜಕಾರ ಣದ ವಿರುದ್ಧ ಮತದಾರ ತೋರಿದ ತಿರಸ್ಕಾರ ಎಂದು ವ್ಯಾಖ್ಯಾನಿಸಲಾ ಗುತ್ತಿದೆ. ಹೀಗಾಗಿ ಇದರ ಪರಿಣಾಮ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೂ ಆವರಿಸಿದ್ದು, ಅವರ ವಿರುದ್ಧ ಬಹಿರಂಗವಾಗಿ ತೊಡೆತ ಟ್ಟುತ್ತಿದ್ದವರ ಯಾದಿಗೆ ಇನ್ನಷ್ಟು ಜನ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಪಕ್ಷದೊಳಗೆ ನಡೆಯುತ್ತಿದ್ದ “ಡಿಸೆಂಬರ್‌’ ಚರ್ಚೆಗೆ ಮತ್ತಷ್ಟು ಬಲ ಬರಲಿದೆ.ಉಪಚುನಾವಣೆ ನಡೆದ 3 ಕ್ಷೇತ್ರಗಳ ಪೈಕಿ ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲಾಗಿತ್ತು.ಇದಕ್ಕೆ ಬಿಜೆಪಿಯ ಕಾರ್ಯಕರ್ತ ಪಡೆ ಕನಲಿ ಕೆಂಡವಾ ಗಿತ್ತು. ಪಕ್ಷದಲ್ಲಿ ಹಣವಂತರಿಗೆ, ಕುಟುಂಬ ಹಿನ್ನೆಲೆ ಇರುವವ ರಿಗೆ ಮಾತ್ರ ಅವಕಾಶ. ವಂಶವಾದದ ವಿರುದ್ಧ ಬಿಜೆಪಿಯ ಟೀಕೆ “ಸೆಲೆಕ್ಟಿವ್‌’ ಎಂಬ ಅಭಿಪ್ರಾಯ ಮೂಡಿತ್ತು.

ಅವಕಾಶ ಕಳೆದುಕೊಂಡಿತೇ?

ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್‌ ಅವರಿಗೆ ಟಿಕೆಟ್‌ ಕೊಡಬೇಕೆಂದು ಬಿಜೆಪಿಯ ಒಕ್ಕಲಿಗ ನಾಯಕರೆಲ್ಲರೂ ಪ್ರತಿಪಾದಿಸಿದ್ದರು. ಹೈಕಮಾಂಡ್‌ ಸಮ್ಮತಿಸಿದ್ದರೂ ಕುಮಾರಸ್ವಾಮಿ ಹಠ ಮೇಲುಗೈ ಸಾಧಿಸಿತ್ತು. ಬಿಜೆಪಿಯಿಂದ ಯೋಗೇಶ್ವರ್‌ ಸ್ಪರ್ಧಿಸಿ ಗೆದ್ದಿದ್ದರೆ ಹಳೇ ಮೈಸೂರು ಭಾಗದಲ್ಲಿ ಯೋಗೀ ಪರ್ಯಾಯ ಒಕ್ಕಲಿಗ ನಾಯಕರಾಗುತ್ತಿದ್ದ ಅವಕಾಶವನ್ನು ಕಳೆದುಕೊಂಡಂತಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next