Advertisement

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

11:21 PM Nov 21, 2024 | Team Udayavani |

ಬೆಂಗಳೂರು: ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣಕ್ಕೆ ಕಡಿವಾಣ ಹಾಕುವಂತೆ ಬೆಂಬಲಿಗರು ಸಭೆ ನಡೆಸಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ರಾತ್ರಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದು, ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

Advertisement

ಈಗಾಗಲೇ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಹಲವು ರೀತಿಯ ಹೋರಾಟಕ್ಕೆ ಮುಂದಾಗಿದೆ. ಈ ಹೊತ್ತಿನಲ್ಲಿ ಹಿರಿಯ ನಾಯಕ, ಶಾಸಕ ಯತ್ನಾಳ್‌ ಭಿನ್ನರಾಗ ಎತ್ತಿರುವುದು ರಾಜ್ಯ ಬಿಜೆಪಿಗೆ ಇರಿಸುಮುರಿಸು ತಂದಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಭೇಟಿ ಕುತೂಹಲ ಕೆರಳಿಸಿದೆ.

ಈಗಾಗಲೇ ವಕ್ಫ್ ನೋಟಿಸ್‌ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ, 2 ದಿನಗಳ ಹೋರಾಟವನ್ನು ಕೈಗೊಂಡಿತ್ತು. ಈಗಾಗಲೇ ಗುರುವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದ ಬಿಜೆಪಿ, ಇಂದು ಬೆಂಗಳೂರು ಸೇರಿ ಹಲವು ಕಡೆ ಹೋರಾಟ ನಡೆಸಲಿದೆ. ಇನ್ನು ಅಧಿವೇಶನದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಯವàಜನೆ ರೂಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ, ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಹಾಗೂ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದರು. ಈ ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತರ ಅಹವಾಲು ಆಲಿಸಿ ವರದಿ ಸಿದ್ಧಪಡಿಸಿ ಅಧಿವೇಶನದಲ್ಲಿ ಒಳಗೂ – ಹೊರಗೂ ಹೋರಾಟ ನಡೆಸಲು ಯೋಜಿಸಿದ್ದಾರೆ. ಈ ಎಲ್ಲ ವಿಷಯಗಳನ್ನು ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಯತ್ನಾಳ್‌ ಬಣಕ್ಕೆ ತಡೆ ಹಾಕಲು ಮನವಿ?
ಇದರ ಬೆನ್ನಲ್ಲೇ ಯತ್ನಾಳ್‌ ತಂಡವು ವಕ್ಫ್ ನೋಟಿಸ್‌ ವಿರುದ್ಧ ಒಂದು ತಿಂಗಳ ಕಾಲ ಜನಜಾಗೃತಿ ಅಭಿಯಾನವನ್ನು ಪ್ರತ್ಯೇಕವಾಗಿ ಕೈಗೊಳ್ಳಲಾಗುವುದು ಎಂದು ಘೋಷಣೆ ಮಾಡಿತ್ತು. ಇದು ಪಕ್ಷದ ವಲಯದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ ವಿಜಯೇಂದ್ರ ಅವರಿಗೆ ಸೆಡ್ಡು ಹೊಡೆಯುವ ಸಂಬಂಧ ಈ ಹೋರಾಟವನ್ನು ರೂಪಿಸಲಾಗಿದೆ ಎಂದೇ ಬಿಂಬಿಸಲಾಗಿತ್ತು. ಇದಕ್ಕೆ ಕಡಿವಾಣ ಹಾಕುವ ಹಾಗೂ ಇದರಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ತಪ್ಪಿಸುವ ಸಂಬಂಧ ಸೂಕ್ತ ಸೂಚನೆ ನೀಡುವಂತೆ ಹೈಕಮಾಂಡ್‌ ನಾಯಕರಿಗೆ ವಿಜಯೇಂದ್ರ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧಿವೇಶನ ಬಗ್ಗೆಯೂ ಚರ್ಚೆ?
ಇನ್ನು ಬೆಳಗಾವಿ ಅಧಿವೇಶನ ಸಮೀಪಿಸುತ್ತಿದ್ದು, ರಾಜ್ಯ ಸರಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತೀರ್ಮಾನಿಸಿದೆ. ಮುಡಾ ಹಗರಣ, ವಕ್ಫ್ ನೋಟಿಸ್‌ ಗೊಂದಲ ಹಾಗೂ ವಾಲ್ಮೀಕಿ ಹಗರಣಗಳ ಬಗ್ಗೆ ಧ್ವನಿ ಎತ್ತಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಸಂಬಂಧ ಹೈಕಮಾಂಡ್‌ ನಾಯಕರ ಸಲಹೆ – ಸೂಚನೆಗಳನ್ನು ಇದೇ ವೇಳೆ ವಿಜಯೇಂದ್ರ ಕೇಳಲಿದ್ದಾರೆ ಎನ್ನಲಾಗಿದೆ.

Advertisement

ವಕ್ಫ್  ಹೋರಾಟ ಕುರಿತು ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿಲ್ಲ. ನಾವ್ಯಾರು “ಕ್ರೆಡಿಟ್‌ ವಾರ್‌’ ನಡೆಸುತ್ತಿಲ್ಲ. ನಮ್ಮ ಹೋರಾಟದಲ್ಲಿ ಯತ್ನಾಳ್‌ ಕೂಡ ಭಾಗವಹಿಸಲಿದ್ದಾರೆ. ಯಾರು ಮೊದಲು ಹೋರಾಟ ಆರಂಭಿಸಿದರು ಎಂಬುದು ಮುಖ್ಯವಲ್ಲ. ಪ್ರಧಾನಿ ಮೋದಿ ವಕ್ಫ್  ತಿದ್ದುಪಡಿ ತರಲು ಹೊರಟಿದ್ದಾರೆ. ಅದಕ್ಕೆ ಪೂರಕವಾಗಿ ಹೋರಾಟ ನಡೆಸಲಾಗುತ್ತಿದೆ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next