Advertisement
ಎಸ್ಎಲ್ವಿ ಕನ್ಸ್ಟ್ರಕ್ಷನ್ (ಸಿಎಚ್ಎನ್ವಿ ರೆಡ್ಡಿ) ಕಂಪೆನಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಶೇ.41ರಷ್ಟು ಕಡಿಮೆ ಬಿಡ್ ಮಾಡುವ ಮೂಲಕ ಗುತ್ತಿಗೆದಾರರು ಈ ಕಾಮಗಾರಿಯನ್ನು ವಹಿಸಿಕೊಂಡಿದ್ದಾರೆ. ಪುಂಜಾಲಕಟ್ಟೆಯಿಂದ ಬಿ.ಸಿ.ರೋಡ್ ವರೆಗೆ ಈಗ ರಸ್ತೆ ಇರುವಷ್ಟೇ ಅಗಲದಲ್ಲಿ (10 ಮೀ. ಅಗಲ) ಚಾರ್ಮಾಡಿ ರಸ್ತೆ ದ್ವಿಪಥಗೊಳ್ಳಲಿದೆ. ಈಗ ಘಾಟಿಯ ಕೆಲವು ಕಡೆ 7 ಮೀ. ಹಾಗೂ ಬಹುತೇಕ ಕಡೆಗಳಲ್ಲಿ 5.50 ಮೀ. ಮಾತ್ರ ಅಗಲವಿದೆ.
Related Articles
Advertisement
ಕಾಮಗಾರಿ ಕಾಲಕ್ಕೆ ಸಂಚಾರ ಸಂಕಟ!ಸದ್ಯದ ಮಾಹಿತಿ ಪ್ರಕಾರ ಕಾಮಗಾರಿಯು 48 ತಿಂಗಳೊಳಗೆ ಪೂರ್ಣವಾಗಬೇಕು. ಎಲ್ಲಿ ಸಾಧ್ಯ ಇದೆಯೋ ಅಲ್ಲೆಲ್ಲ ಸಂಚಾರ ಸುಧಾರಣೆಯನ್ನು ಕೈಗೊಂಡು ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಆ ವೇಳೆ ಘಾಟಿಯಲ್ಲಿ ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆ ಇದೆ. ಅನಿವಾರ್ಯವಾಗಿ ಸಂಚಾರ ಸ್ಥಗಿತ ಮಾಡಬೇಕಾಗಿ ಬಂದರೆ ಒಂದೆರಡು ತಿಂಗಳುಘಾಟಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿ ಕಾಮಗಾರಿ ನಡೆಸುವ ಸಾಧ್ಯತೆಯೂ ಇದೆ. ಅತಿ ಸೂಕ್ಷ್ಮ ಪಶ್ಚಿಮಘಟ್ಟ; ಮರಗಳ ಲೆಕ್ಕಾಚಾರ ಬಾಕಿ!
ಚಾರ್ಮಾಡಿ ಘಾಟಿ ಪ್ರದೇಶವು ಅಧಿಕ ಮಳೆಯಿಂದ ಕೂಡಿದ್ದು, ಅತಿ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶ. ಹಾಗಾಗಿ ಇಲ್ಲಿ ಸೀಮಿತ ಅಭಿವೃದ್ಧಿ ಕಾಮಗಾರಿಯನ್ನಷ್ಟೇ ಕೈಗೊಳ್ಳಬಹುದಾಗಿದೆ. ಆದರೂ ಈ ಭಾಗದ ರಸ್ತೆಯನ್ನು ಸುಗಮ ಸಂಚಾರಕ್ಕೆ ಕೇಂದ್ರ ಭೂಸಾರಿಗೆ ಮಂತ್ರಾಲಯದ 2024-25ನೇ ಸಾಲಿನ ಅನುಮೋದಿತ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ. “ಚಾರ್ಮಾಡಿಯಲ್ಲಿ ಈ ಹಿಂದೆಯೇ 20 ಮೀ. ಅಗಲವನ್ನು ರಸ್ತೆಗಾಗಿ ನಮೂದು ಮಾಡಲಾಗಿದೆ. ಅರಣ್ಯ ಇಲಾಖೆ ನಕ್ಷೆಯಲ್ಲೂ ಹಾಗೆಯೇ ಇದೆ. ಮುಂದೆ ಈ ವ್ಯಾಪ್ತಿಯಲ್ಲಿರುವ ಮರಗಳು ಹಾಗೂ ಪರ್ಯಾಯ ವ್ಯವಸ್ಥೆ ಬಗ್ಗೆ ಅರಣ್ಯ ಇಲಾಖೆ ಜತೆಗೆ ಚರ್ಚಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. “ಉದಯವಾಣಿ’ ಜತೆಗೆ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಅವರು, “ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಾಮಗಾರಿಗೆ ಸಂಬಂಧಿಸಿ ಇನ್ನಷ್ಟೇ ಮರ ಗಿಡಗಳ ಲೆಕ್ಕಾಚಾರ ನಡೆಯಬೇಕಿದೆ. ಗುತ್ತಿಗೆದಾರರು ಈ ಕುರಿತು ಮನವಿ ಸಲ್ಲಿಸಿದ ಬಳಿಕ ಹಾಲಿ ರಸ್ತೆಯ ಅಕ್ಕಪಕ್ಕದಲ್ಲಿ ಅಗತ್ಯವಿರುವ ಭೂಮಿ ಹಾಗೂ ಅಲ್ಲಿ ಈಗ ಇರುವ ಮರಗಳ ಲೆಕ್ಕಾಚಾರ ಮಾಡಲಾಗುವುದು’ ಎನ್ನುತ್ತಾರೆ. “ಟೆಂಡರ್ ಪ್ರಕ್ರಿಯೆ ಪೂರ್ಣ’
ಚಾರ್ಮಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಏಜೆನ್ಸಿಯವರಿಗೆ ಸ್ವೀಕಾರ ಪತ್ರ ಕೂಡ ನೀಡಲಾಗಿದೆ. ಇನ್ನು ಒಪ್ಪಂದ ಪ್ರಕ್ರಿಯೆ ಬಾಕಿ ಇದೆ. ಜನವರಿ ವೇಳೆಗೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. -ಶಿವಪ್ರಸಾದ್ ಅಜಿಲ, ಕಾರ್ಯಕಾರಿ ಅಭಿಯಂತರು, ರಾ.ಹೆದ್ದಾರಿ ವಿಭಾಗ, ಮಂಗಳೂರು ಏನೆಲ್ಲ ಕಾಮಗಾರಿ?
-ಚಾರ್ಮಾಡಿ ಹಾಲಿ ರಸ್ತೆಯ ಅಕ್ಕಪಕ್ಕದ ಮರ, ಕಂಬ ತೆರವು, ಮಣ್ಣು ಸಮತಟ್ಟು -ಹಾಲಿ ಇರುವ ರಸ್ತೆಯನ್ನು 10 ಮೀ. ಅಗಲಗೊಳಿಸಿ ದ್ವಿಪಥ ರಸ್ತೆ ರಚನೆ -ರಸ್ತೆಯ ಉದ್ದಕ್ಕೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಮೋರಿ, ತೋಡಿನ ರಚನೆ, ಕೆಲವೆಡೆ ಸೇತುವೆ ರಚನೆ – ಗುಡ್ಡದ ಮಣ್ಣು ಜರಿದು ಬೀಳದಂತೆ ಸುಭದ್ರ ರಿಟೈನಿಂಗ್ ವಾಲ್, ಬಂಡೆ ಕಲ್ಲುಗಳು ಜಾರಿ ಬೀಳದಂತೆ ಮುನ್ನೆಚ್ಚರಿಕೆ ಕಾಮಗಾರಿ -ದಿನೇಶ್ ಇರಾ