Advertisement

ಕಾರ್ಯಕರ್ತರೊಂದಿಗೆ ಶಾ ಸಂವಾದ

06:05 AM Apr 28, 2018 | |

ಕೊಪ್ಪಳ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

Advertisement

ಇಲ್ಲಿನ ಶಿವ ಚಿತ್ರಮಂದಿರದಲ್ಲಿ ನಡೆದ ಸಂವಾದ ಸಮಾರಂಭದಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಹೇಗೆ
ಸನ್ನದ್ಧರಾಗಬೇಕು? ಇದುವರೆಗೂ ಮಾಡಿಕೊಂಡಿರುವ ತಯಾರಿಗಳೇನು? ಮುಂದೆ ಏನು ಮಾಡಬೇಕೆಂಬ ಹಲವು ಅಂಶಗಳನ್ನು ಶಾ ಮನದಟ್ಟು ಮಾಡಿದರು.

ಪಕ್ಷದ ಸಂಘಟನಾತ್ಮಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದಲ್ಲಿನ ಆಂತರಿಕ ಬೇಗುದಿ ಅರಿತು ಶಮನ ಮಾಡುವ ನಿಟ್ಟಿನಲ್ಲಿ ಭಿನ್ನಾಭಿಪ್ರಾಯ ಹೊಂದಿರುವ ನಾಯಕರ ನಡುವೆ ಸಂಧಾನ ನಡೆಸಿ, ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.

ಗವಿಮಠಕ್ಕೆ ಭೇಟಿ: ಸಂಘಟನಾತ್ಮಕ ಸಭೆಯ ಬಳಿಕ ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಗವಿಶ್ರೀಗಳ ಆಶೀರ್ವಾದ ಪಡೆದು,
ಕುಶಲೋಪಹರಿ ನಡೆಸಿದರು. ಜೊತೆಗೆ ಕೊಪ್ಪಳ ಜಾತ್ರೆಯ ಅದ್ಧೂರಿತನದ ಕಿರುಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಕುಕನೂರಿನ ಕಾರ್ಯಕ್ರಮಕ್ಕೆ ತೆರಳಿದರು. ಈ ವೇಳೆ ಪಕ್ಷದ ಮುಖಂಡರಾದ ಚಂದ್ರಶೇಖರಗೌಡ ಹಲಗೇರಿ,ಬಿ.ಗಿರೀಶಾನಂದ, ರಾಜು ಬಾಕಳೆ, ಹೇಮಲತಾ ಸೇರಿದಂತೆ ಇತರರು ಇದ್ದರು.

ಸಿ.ವಿ.ಚಂದ್ರಶೇಖರ ಹಾಜರು
ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿ, ಮೊದಲ ಪಟ್ಟಿಯಲ್ಲಿ ವರಿಷ್ಠರ ಬೆಂಬಲ ಪಡೆದಿದ್ದ ಸಿ.ವಿ.ಚಂದ್ರಶೇಖರ ಅವರಿಗೆ ಕೊನೆ ಘಳಿಗೆಯಲ್ಲಿ ಪಕ್ಷದ ಬಿ ಫಾರಂ ಸಿಕ್ಕಿರಲಿಲ್ಲ. ಹೀಗಾಗಿ ಅವರ ರಾಜಕೀಯ ಗುರು ಹಾಗೂ ಸಂಸದ ಸಂಗಣ್ಣ ಕರಡಿ ವಿರುದ್ಧ ಅಸಮಾಧಾನಗೊಂಡಿದ್ದ ಸಿವಿಸಿ, ಕಳೆದ ಎರಡು ದಿನಗಳಿಂದ ಮೌನಕ್ಕೆ ಶರಣಾಗಿದ್ದರು. ಅಮಿತ್‌ ಶಾ ಬರುತ್ತಿದ್ದಂತೆ ಮುಖಂಡರ ಸಾಲಿನಲ್ಲಿ ಪ್ರತ್ಯಕ್ಷವಾಗುವ ಮೂಲಕ ಬಿಜೆಪಿ ಬಿಟ್ಟಿಲ್ಲ ಎನ್ನುವ ಸೂಚನೆ ನೀಡಿದರಾದರೂ ಪಕ್ಷದ ಜಿಲ್ಲೆಯ ಕೆಲ ಮುಖಂಡರ ಬಗ್ಗೆ ಅವರ ಮುನಿಸು ತಣಿದಿಲ್ಲ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next