Advertisement
ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಆದರೆ ಇನ್ನೂ ಅಧಿಕೃತವಾಗಿ ಘೋಷಣೆ ಯಾಗಿಲ್ಲ. ಕೆಲವು ಬದಲಾವಣೆಯಾಗುವ ಸಾಧ್ಯತೆ ಇರುವುದರಿಂದ ಗೌಪ್ಯವಾಗಿಯೇ ಉಳಿದಿದೆ. ಬಿಜೆಪಿಯಿಂದ ಬೂಕಹಳ್ಳಿ ಮಂಜು: ಪಕ್ಷದ ಮೂಲಗಳ ಪ್ರಕಾರ ಕೆ.ಆರ್.ಪೇಟೆಯ ಬೂಕಹಳ್ಳಿಯ ಮಂಜು ಅವರಿಗೆ ಬಹುತೇಕ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಚುನಾವಣೆ ಎದುರಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ.
Related Articles
Advertisement
ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೆಸ್: ಇತ್ತ ಕಾಂಗ್ರೆಸ್ ಜೆಡಿಎಸ್‌ನಿಂದ ಸ್ಥಾನ ಕಸಿದುಕೊಳ್ಳಲು ಕೈ ಕಾರ್ಯಕರ್ತರು ಕಸರತ್ತು ಆರಂಭಿಸಿದ್ದಾರೆ. ಜಿಲ್ಲೆಯಿಂದ ಮೂವರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ. ಅದರಲ್ಲಿ ಮಳವಳ್ಳಿ ಮೂಲದ ಬೆಂಗಳೂರಿನ ಉದ್ಯಮಿ ಶಿವಕುಮಾರ್ ಹೆಸರು ಕೇಳಿ ಬರುತ್ತಿದೆ. ಬಹುತೇಕ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ದಳ-ಕೈಗೆ ಅನಾನುಕೂಲ: ಜಿಪಂ ಹಾಗೂ ತಾಪಂ ಚುನಾವಣೆ ನಡೆಯದ ಪರಿಣಾಮ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಕ್ಕು ಹೊಂದಿಲ್ಲದಿರುವು ದರಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಹೆಚ್ಚು ಅನಾನುಕೂಲವಾಗಲಿದೆ. ಕಳೆದ ಬಾರಿ ಒಟ್ಟು 41 ಜಿಲ್ಲಾ ಪಂಚಾಯಿತಿ ಸದಸ್ಯರ ಪೈಕಿ 28 ಜೆಡಿಎಸ್, 12 ಹಾಗೂ 1 ಪಕ್ಷೇತರ ಸದಸ್ಯರಿದ್ದರು.
ಜಿಲ್ಲೆಯ ಏಳು ತಾಲೂಕು ಪಂಚಾಯಿತಿಯಿಂದ ಒಟ್ಟು 155 ಸದಸ್ಯರಿದ್ದರು. ಅದರಲ್ಲಿ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರಿದ್ದರು. 5 ತಾಪಂ ಆಡಳಿತ ಜೆಡಿಎಸ್ ಇದ್ದರೆ, 2 ತಾಪಂಗಳು ಕಾಂಗ್ರೆಸ್ ಆಡಳಿತದಲ್ಲಿದ್ದವು. ಈ ಬಾರಿ 46 ಜಿಪಂ ಕ್ಷೇತ್ರಗಳ ಮರುವಿಂಗಡಣೆಯಾಗಿದ್ದು, 5 ಕ್ಷೇತ್ರಗಳು ಹೆಚ್ಚುವರಿ ಯಾಗಿದ್ದವು. ತಾಪಂ ಕ್ಷೇತ್ರಗಳಲ್ಲಿ 31 ಕ್ಷೇತ್ರಗಳನ್ನು ಕಡಿತಗೊಳಿಸಿ 124ಕ್ಕಿಳಿಸಲಾಗಿದೆ. ಆದರೆ ಈ ಬಾರಿ ಸದಸ್ಯರಿಲ್ಲದಿರುವುದರಿಂದ ಕೈ-ದಳಕ್ಕೆ ನಷ್ಟವಾಗಲಿದೆ. ಇದು ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇದೆ.
ಗ್ರಾಮ ಪಂಚಾಯಿತಿ ಸದಸ್ಯರೇ ನಿರ್ಣಾಯಕ
ಈ ಬಾರಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಯದ ಪರಿಣಾಮ ಮತಗಳು ಕಡಿಮೆಯಾಗಿದೆ. ಗ್ರಾಪಂ ಚುನಾವಣೆಯಲ್ಲಿ ಮೂರು ಪಕ್ಷಗಳಲ್ಲಿ ಪೈಪೋಟಿ ಹೆಚ್ಚಾಗಿತ್ತು. ಪಕ್ಷದ ಚಿಹ್ನೆಯಡಿ ಗೆಲ್ಲದಿದ್ದರೂ ಪಕ್ಷದ ಬೆಂಬಲಿತರಾಗಿ ಕಣಕ್ಕಿಳಿದಿದ್ದರು. ಇದರಲ್ಲಿ ಬಿಜೆಪಿಯು ಗರಿಷ್ಠ ಮಟ್ಟದ ಬೆಂಬಲಿತ ಸದಸ್ಯರನ್ನು ಹೊಂದಿದೆ. ಅಲ್ಲದೆ, ಗ್ರಾಪಂ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ದೊಡ್ಡ ಮಟ್ಟದ ಆಪರೇಷನ್ ಕಮಲ ಮಾಡಿ, ಕೆಲವು ಕಡೆ ಅ ಧಿಕಾರದ ಗದ್ದುಗೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೂ ಗ್ರಾಪಂ ಸದಸ್ಯರ ಮೇಲೆ ಕಣ್ಣಿಟ್ಟಿದೆ. ಚುನಾವಣೆಯಲ್ಲಿ ಗ್ರಾಪಂ ಸದಸ್ಯರೇ ನಿರ್ಣಾಯಕ ಪಾತ್ರ ವಹಿಸುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೇಡಿಕೆ ಹೆಚ್ಚಾಗಿದೆ.
3 ಪಕ್ಷಗಳಿಗೂ ಪ್ರತಿಷ್ಠೆ
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಜೆಡಿಎಸ್ ಸ್ಥಾನ ಉಳಿಸಿಕೊಳ್ಳಲು ಮುಂದಾಗಿದ್ದರೆ, ಕಾಂಗ್ರೆಸ್ ಹಾಗೂ ಬಿಜೆಪಿ ಜೆಡಿಎಸ್‌ನಿಂದ ಸ್ಥಾನ ಕಸಿದುಕೊಳ್ಳಲು ಕಸರತ್ತು ನಡೆಸುತ್ತಿವೆ. ಅದಕ್ಕಾಗಿಯೇ ಪ್ರಬಲ ಆಕಾಂಕ್ಷಿಗಳಿಗೆ ಮಣೆ ಹಾಕುತ್ತಿವೆ. ಈ ಚುನಾವಣೆಯು ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಮೂರು ಪಕ್ಷಗಳಲ್ಲಿವೆ. ಅಲ್ಲದೆ, ಬಿಜೆಪಿ ಈಗಾಗಲೇ ಜಿಲ್ಲೆಯಲ್ಲಿ ಖಾತೆ ತೆರೆದಿರುವುದರಿಂದ ಮತ್ತಷ್ಟು ವಿಸ್ತರಿಸಿಕೊಳ್ಳಲು ಹವಣಿಸುತ್ತಿದೆ.
ನಗರಸಭೆ, ಪುರಸಭೆಯಲ್ಲಿ ಜೆಡಿಎಸ್ ಮೇಲುಗೈ
“ಜಿಲ್ಲೆಯ ನಗರಸಭೆ ಹಾಗೂ ಪುರಸಭೆಗಳಲ್ಲಿ ಜೆಡಿಎಸ್ ಮೇಲುಗೈ ಸಾ ಧಿಸಿದೆ. ಮಂಡ್ಯ ನಗರಸಭೆ, ಮದ್ದೂರು, ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ ಪುರಸಭೆಗಳಲ್ಲಿ ಜೆಡಿಎಸ್ ಅಧಿ ಕಾರದ ಚುಕ್ಕಾಣಿ ಹಿಡಿದಿದೆ. ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಸದಸ್ಯರ ಸಹಕಾರದೊಂದಿಗೆ ಬಿಜೆಪಿ ಆಡಳಿತ ರಚಿಸಿದೆ. ಇನ್ನುಳಿದಂತೆ ಬೆಳ್ಳೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲಾಗಿದೆ. ಇಲ್ಲಿ ಒಟ್ಟು 199 ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.”
ಒಟ್ಟು 4025 ಮತದಾರರು ಮಂಡ್ಯ ಜಿಲ್ಲೆಯ 232 ಗ್ರಾಮ ಪಂಚಾಯಿತಿಗಳ 3818 ಸದಸ್ಯರು, ಒಂದು ನಗರಸಭೆಯ 35, ಆರು ಪುರಸಭೆ 151, ಒಂದು ಪಟ್ಟಣ ಪಂಚಾಯಿತಿ 13, ಸಂಸದರು 1, ಶಾಸಕರು 7 ಮಂದಿ ಸೇರಿದಂತೆ ಒಟ್ಟು 4025 ಮತದಾರರನ್ನು ಹೊಂದಿದ್ದಾರೆ.