Advertisement

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

12:15 AM Dec 18, 2024 | Team Udayavani |

ಬಾಗಲಕೋಟೆ: ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ಜಾರಿಗೊಂಡರೆ ಒಳ್ಳೆ ಯದು. ಅದಕ್ಕೂ ಮುಂಚೆ ಸಾಧಕ-ಬಾಧಕ ಕುರಿತು ಸಮಗ್ರ ಚರ್ಚೆಯಾಗಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಸುದ್ದಿಗಾರರ ಜತೆ ಹೇಳಿದರು.

Advertisement

ಒಂದು ದೇಶ ಒಂದು ಚುನಾವಣೆ ಚರ್ಚೆಯಾಗದೇ ಎಲ್ಲವನ್ನೂ ನೇರವಾಗಿ ಹೇಳಲು ಸಾಧ್ಯವಿಲ್ಲ. ಆ ಕುರಿತು ಚರ್ಚೆಯಾಗಲಿ. ಸರಕಾರಗಳು ಎಲ್ಲರಿಗೂ ಅನುಕೂಲ ಕಲ್ಪಿಸಬೇಕು, ಒಳ್ಳೆಯದಾಗಬೇಕು. ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳಿಗೆ ಗಟ್ಟಿಯಾಗಿ ಕೇಳಬೇಕು. ಅವರ ಮುಂದಾಳತ್ವದಲ್ಲಿ ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದರು. ಜನಪ್ರತಿನಿಧಿಗಳ ಮೂಲಕವೇ ಸಮಸ್ಯೆ ಬಗೆಹರಿಯಬೇಕು ಎಂದರು.

ಉಡುಪಿಯಲ್ಲಿ ಭಕ್ತ ಸಿದ್ಧಾಂತ ಉತ್ಸವ
ಈ ಸಲದ ಭಕ್ತ ಸಿದ್ಧಾಂತ ಉತ್ಸವ ಉಡುಪಿಯಲ್ಲಿ ನಡೆಯಲಿದೆ. ಗುರುಗಳು ಕಾಲವಾದ ಬಳಿಕ ಮೊದಲು ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿತ್ತು. ಹಿರಿಯ ಶ್ರೀಗಳು ಇದ್ದಾಗ ಪ್ರತೀ 2 ವರ್ಷಕ್ಕೊಮ್ಮೆ ತಣ್ತೀಜ್ಞಾನ ಸಮ್ಮೇಳನ ಅಂತ ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ಜ. 1ರಿಂದ 3ರ ವರೆಗೂ ಗುರುಗಳ ಮಹಾಸಮಾರಾಧನೆ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next