Advertisement
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಹಾಲ ಸಿದ್ದಪ್ಪ ಪೂಜೇರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ತನ್ನ ಉಮೇದುವಾರಿಕೆ ಸಲ್ಲಿಸಿದ ನಂತರ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ಬುಧವಾರ ಬೃಹತ್ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
ಮಧುಗಿರಿ ಕ್ಷೇತ್ರದಲ್ಲಿ ನನ್ನ ಮುಂದೆ ಚುನಾವಣೆಗೆ ಸ್ಪರ್ಧಿಸಿದ 5 ಜನ ಡಿಪಾಸಿಟ್ ಬಂದಿರಲಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿಯೂ 2023 ಕ್ಕೆ ಯಾರಿಗೂ ಡಿಪಾಸಿಟ್ ಬರಬಾರದು. ಜೆಡಿಎಸ್ ಮತ್ತು ಬಿಜೆಪಿಗೆ ನೀವು ತಕ್ಕಪಾಠ ಕಲಿಸಬೇಕಿದೆ. ಪ್ರತಿ ಹಳ್ಳಿಯ ಬೂತ್‌ನಲ್ಲಿ ಯಾರ್ ಏನ್ ಮಾಡ್ತಾರೇ ಎಂದು ಕಾವಲು ಕಾಯಬೇಕು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ತಿರುಗಿ ನೋಡ್ಕೊಬೇಕು ಹಾಗೇ ಲೀಡ್ ಕೋಡಬೇಕು ನನಗೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ತುಮಕೂರು ನಗರ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವಾಧ್ಯಕ್ಷ ವಿನಯ್, ಮುಖಂಡರಾದ ಎಂಎನ್‌ಜೆ ಮಂಜುನಾಥ, ಪ್ರಸನ್ನಕುಮಾರ್, ಗಂಗಾಧರಪ್ಪ, ರಾಜಣ್ಣ, ಹುಲೀಕುಂಟೆ ಪ್ರಸಾದ್, ಓಬಳರಾಜು, ಆನಂದ್, ಕವಿತಾ, ಜಯರಾಂ, ಮೂರ್ತಪ್ಪ ಸೇರಿದಂತೆ ಇತರರು ಇದ್ದರು.
ಸ್ವಾಮೀಜಿಗಳ ಆರ್ಶಿವಾದ ಪಡೆದ ಮಾಜಿ ಡಿಸಿಎಂಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನಾಮಪತ್ರ ಸಲ್ಲಿಸುವ ಮುನ್ನಾ ತುಮಕೂರು ಸಿದ್ದಗಂಗಾ ಕ್ಷೇತ್ರದ ಶ್ರೀಸಿದ್ದಗಂಗಾ ಸ್ವಾಮೀಜಿಗಳು, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ, ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ ಮತ್ತು ಬೆಳ್ಳಾವಿ ಶ್ರೀಕಾರದ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ, ತಂಗನಹಳ್ಳಿ ಶ್ರೀಮಠದ ಶ್ರೀಬಸವ ಮಹಾಲಿಂಗ ಸ್ವಾಮೀಜಿಯವರ ಆರ್ಶಿವಾದ ಪಡೆದರು. 35 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ೩೫ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರ ಜೊತೆ ತಾಲೂಕು ಕಛೇರಿವರೆಗೂ ರೋಡ್‌ಶೋ ನಡೆಸಿ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶಿಸಿದರು. ರೂಡ್‌ಶೋನಲ್ಲಿ ೧೫ಕ್ಕೂ ಅಧಿಕ ಜೆಸಿಬಿಗಳಿಂದ ಎಂಎನ್‌ಜೆ ಮಂಜುನಾಥ ಮತ್ತು ಅಭಿಮಾನಿಗಳು ಮಾಜಿ ಡಿಸಿಎಂ ಪರಮೇಶ್ವರಗೆ ಹೂವಿನ ಸುರಿಮಳೆ ಹಾಕುವ ಮೂಲಕ ಕಾಂಗ್ರೆಸ್ ಪಕ್ಷದ ಪರವಾಗಿ ಅದ್ದೂರಿಯಾಗಿ ಪ್ರಚಾರ ನಡೆಸಿದರು. ಮಹಿಳಾ ಪೇದೆ ಮೇಲೆ ಕಲ್ಲೆಸೆದ ಕಿಡಿಗೇಡಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನಾಮಪತ್ರ ಸಲ್ಲಿಸುವ ವೇಳೆ ಮಹಿಳಾ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೋರಾಟ ನಡೆದಿದೆ. ಪರಮೇಶ್ವರ ಜೊತೆ ನಾಮಪತ್ರ ಸಲ್ಲಿಸಲು ಒಳಗೇ ಬಿಡಲಿಲ್ಲ ಎಂದು ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ದಾದ ನಡೆದಿದೆ. ನಂತರ ಹೊರಗಡೆಯಿಂದ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಮಹಿಳಾ ಪೇದೆಯ ತಲೆಗೆ ಪೆಟ್ಟಾಗಿ ಕೊರಟಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್‌ಕುಮಾರ್ ಶಹಾಪುರ್ ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.