Advertisement
ಚೈತ್ರಾ – ರಜತ್ ನಡುವೆ ಮತ್ತೆ ವಾಗ್ವಾದ: ನಿನ್ನೆಯಷ್ಟೇ ದೊಡ್ಡ ಜಗಳವಾಗಿ ಆ ಬಳಿಕ ಕ್ಷಮೆಯಾಚಿಸಿ ನಕ್ಕು ಮಾತನಾಡಿದ್ದ ರಜತ್ – ಚೈತ್ರಾ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದೆ.
ದಿಂಬಿನ ಟಾಸ್ಕ್ ನಲ್ಲಿ ಮೊದಲು ಎರಡು ತಂಡದವರು ಸಮಬಲವಾಗಿ ಹೋರಾಟ ನಡೆಸಿದ್ದಾರೆ. ಆ ಬಳಿಕ ಆಟದ ವಿಚಾರದಲ್ಲಿ ರಾದ್ಧಾಂತವೇ ನಡೆದಿದೆ.
Related Articles
Advertisement
ಹನುಮಂತು ಅವರು ನಾನು ಗೆರೆ ದಾಟಿಲ್ಲ ಇಲ್ಲೇ ನಿಂತುಕೊಂಡಿದ್ದೇನೆ. ನನ್ನ ತಲೆ ಆಫ್ ಆದರೆ ನಾನು ಮೊದಲೇ ಸರಿಯಿಲ್ಲ. ಯಾರಾದ್ರೂ ಗಂಡು ಮಕ್ಕಳು ಆಗಿದ್ರೆ ಇತ್ತಾ ಎಂದು ಹನುಮಂತು ಗರಂ ಆಗಿದ್ದಾರೆ.
ನಾಚಿಕೆ ಆಗಲ್ವಾ ನಿಮಗೆ ಎಂದು ಧನರಾಜ್ ಏರು ಧ್ವನಿಯಲ್ಲಿ ಚೈತ್ರಾಗೆ ಪ್ರಶ್ನೆ ಮಾಡಿದ್ದಾರೆ. ಯಾರಿಗೆ ಹೇಳ್ತಾ ಇದ್ದೀಯಾ ನಾಚಿಕೆ ಆಗಲ್ಲ ಅಂಥ. ಇದೆಲ್ಲ ನನ್ನ ಹತ್ರ ಇಟ್ಕೋಬೇಡ. ಬಾಯಿ ಮುಚ್ಚಿಕೊಂಡು ಇದ್ರೆ ಆಯಿತು ಎಂದು ಆಕ್ರೋಶದ ನುಡಿಯಲ್ಲಿ ಚೈತ್ರಾ ಹೇಳಿದ್ದಾರೆ.
ಇವರು ಮೋಸ ಗುರು ಇವರದ್ದು. ಪ್ರತಿದಿನ ಇದೇ ಆಯಿತು. ನಿಯತ್ತಾಗಿ ಆಡೋಕೆನೇ ಬರಲ್ಲ ಎಂದು ಉಸ್ತುವಾರಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಸ್ತುವಾರಿಗಳು ಯಾವುದೇ ನಿರ್ಧಾರಕ್ಕೆ ಬಾರದ ಕಾರಣಕ್ಕೆ ಹಾಗೂ ಟಾಸ್ಕ್ ನಡುವೆಯೇ ಸ್ಪರ್ಧಿಗಳಲ್ಲಿ ಉಂಟಾದ ವಾಗ್ವಾದ ಅತಿರೇಕಕ್ಕೇರಿದೆ. ಪರಿಣಾಮ ಬಿಗ್ ಬಾಸ್ ಗರಂ ಆಗಿ ಟಾಸ್ಕ್ ಅನ್ನೇ ರದ್ದು ಮಾಡಿದ್ದಾರೆ.
ಟಾಸ್ಕ್ ರದ್ದು ನಾಮಿನೇಟ್ ಶಿಕ್ಷೆ:ಇದಕ್ಕೆ ಪರಿಣಾಮವಾಗಿ ತಂಡದ ನಾಯಕರಾದ ರಜತ್ – ತ್ರಿವಿಕ್ರಮ್ ಅವರು ಆಯಾ ತಂಡದ ಸದಸ್ಯರು ಒಬ್ಬರನ್ನು ನಾಮಿನೇಟ್ ಮಾಡಬೇಕೆಂದು ಹೇಳಿದ್ದಾರೆ. ರಜತ್ ಅವರ ತಂಡದಿಂದ ಹನುಮಂತು ಅವರನ್ನು ನಾಮಿನೇಟ್ ಮಾಡಲಾಗಿದ್ದು, ತ್ರಿವಿಕ್ರಮ್ ಅವರ ತಂಡದಿಂದ ತ್ರಿವಿಕ್ರಮ್ ಅವರು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಹೀಗೆ ಮಾಡಲು ಸಾಧ್ಯವಿಲ್ಲವೆಂದಿದ್ದಾರೆ. ಇದಕ್ಕೆ ತ್ರಿವಿಕ್ರಮ್ ತಂಡದೊಂದಿಗೆ ಅವರು ಚರ್ಚಿಸಿ ಮತ್ತೆ ಅವರನ್ನೇ ನಾಮಿನೇಟ್ ಮಾಡಿಕೊಂಡಿದ್ದಾರೆ. ತ್ರಿವಿಕ್ರಮ್ ಈ ವಾರ ತುಂಬಾ ಚೆನ್ನಾಗಿ ಆಡಿದ್ದಾರೆ. ಆದರೆ ಅವರ ತಂಡದವರು ಒಮ್ಮತದಿಂದ ನಿರ್ಧರಿಸಿದ್ದಾರೆ ಎಂದು ರಜತ್ ಹೇಳಿದ್ದಾರೆ. ಭವ್ಯ ಅವರು ತ್ರಿವಿಕ್ರಮ್ ಅವರ ನಿರ್ಧಾರಕ್ಕೆ ಕಣ್ಣೀರಿಟ್ಟಿದ್ದು, ಆ ಬಳಿಕ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ತುಂಬಾ ಒಳ್ಳೆಯವನು ಆಗೋಕೆ ಹೋಗ್ಬೇಡ. ಇದು ಮೂರ್ಖತನದ ನಿರ್ಧಾರ ಎಂದು ರಜತ್ ಅವರು ತ್ರಿವಿಕ್ರಮ್ ಅವರಿಗೆ ಹೇಳಿದ್ದಾರೆ. ಪದೇ ಪದೇ ಎಡವಿ ಕಣ್ಣೀರಿಟ್ಟ ಚೈತ್ರಾ:
ಕೂಲಿನ ಮೇಲೆ ಬಾಲ್ ಇಟ್ಟುಕೊಂಡು ಆಡುವ ಟಾಸ್ಕ್ನಲ್ಲಿ ಚೈತ್ರಾ ಅವರು ಸತತವಾಗಿ ಹಿನ್ನೆಡೆಯನ್ನು ಅನುಭವಿಸಿದ್ದಾರೆ. ಈ ಟಾಸ್ಕ್ನಲ್ಲಿ ಗೆದ್ದ ತಂಡ ನಾಮಿನೇಷನ್ ನಿಂದ ಪಾರು ಮಾಡುವ ಅಧಿಕಾರವನ್ನು ಪಡೆಯುತ್ತದೆ. ಆದರೆ ಚೈತ್ರಾ ಅವರು ಕೂಲಿನ ಮೇಲಿನ ಬಾಲ್ ಇನ್ನೊಬ್ಬರಿಗೆ ಪಾಸ್ ಮಾಡುವಾಗ ಎಡವಿದ್ದಾರೆ. ಐವತ್ತು ಚಾನ್ಸ್ ಆಯಿತು ಒಂದು ಬಾಲ್ ತಳ್ಳಿಲ್ಲವೆಂದು ತ್ರಿವಿಕ್ರಮ್ ಹೇಳಿದ್ದು, ಆಗ್ತಾ ಇಲ್ಲ ಕೂಲನ್ನು ತಲೆಗೆ ಬಡಿದುಕೊಂಡು ಎಂದು ಚೈತ್ರಾ ಕಣ್ಣೀರಿಟ್ಟಿದ್ದಾರೆ. ಯಾವತ್ತೂ ಕ್ಷಮಿಸಿಕೊಳ್ಳಲ್ಲವೆಂದು ಕಣ್ಣಿರು ಸುರಿಸಿದ್ದಾರೆ. ಚೈತ್ರಾ ಈ ಆಟ ನೋಡಿ ಉಳಿದ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋತರೆ ಯಾವತ್ತೂ ಕ್ಷಮಿಸಿಕೊಳ್ಳಲ್ಲ ಎಂದು ಚೈತ್ರಾ ಕಣ್ಣೀರಿಟ್ಟಿದ್ದಾರೆ. ಸಹ ಸ್ಪರ್ಧಿಗಳು ಚೈತ್ರಾ ಅವರಿಗೆ ಆಟ ಮುಗಿಲಿಲ್ಲವೆಂದು ಧೈರ್ಯ ತುಂಬಿದ್ದಾರೆ. ರಜತ್ ಅವರ ತಂಡ ಈ ಟಾಸ್ಕ್ ಗೆದ್ದಿದೆ.