Advertisement
9 ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಬಾರಿ, ಸಿಪಿಐ ಒಂದು ಬಾರಿ, ಜೆ.ಪಿ. ಎರಡು ಬಾರಿ, ಜೆಡಿಎಸ್ ಹಾಗೂ ಒಂದು ಬಾರಿ ಬಿಜೆಪಿ ಕೂಡ ಹುಮನಾಬಾದ ಮತ ಕ್ಷೇತ್ರದಲ್ಲಿ ಗೆಲ್ಲವು ಕಂಡಿದೆ. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲವು ಕಂಡ ಸುಭಾಷ ಕಲ್ಲೂರ್, ಲಾಭದಾಯಕ ಹುದ್ದೆ ಹಿನ್ನೆಲೆಯಲ್ಲಿ 2003ರಲ್ಲಿ ಶಾಸಕ ಸ್ಥಾನ ಕಳೆದುಕೊಳ್ಳುವಂತಾಗಿತ್ತು.
Related Articles
Advertisement
ಶಿವಾನಂದ ಮಂಠಾಳಕರ್ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಸಧ್ಯ ಜಿಲ್ಲಾ ಉಪಾಧ್ಯಕ್ಷರಾಗಿದ್ದು, ಕಳೆದ ಚುನಾವಣೆಯಲ್ಲಿ ಕೂಡ ಸ್ಪರ್ಧೆ ನಡೆಸಲು ಹಲವು ಪ್ರಯತ್ನ ನಡೆಸಿದ್ದರು. ಆದರೆ ಫಲ ನೀಡದ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಕಾರಣಕ್ಕೂ ಟಿಕೆಟ್ ಕೈ ತಪ್ಪಬಾರದು ಎಂದು ಸಂಘ ಪರಿವಾರದ ಮೂಲಕ ಪಪೋಟಿ ನಡೆಸಿದ್ದಾರೆ.
ರಾಜೇಶ್ವರ ಜಿಲ್ಲಾ ಪಂಚಾಯತ ಸದಸ್ಯ ಗುಂಡುರೆಡ್ಡಿ ಯುವ ಕ್ರಾಂತಿ ಯುವಕ ಸಂಘಟನೆಗಳ ಮೂಲಕ ಜನರ ಮಧ್ಯದಲ್ಲಿದ್ದು, ಕಳೆದ ಜಿಪಂ ಚುನಾವಣೆಯಲ್ಲಿ ಸ್ಥಳೀಯ ಶಾಸಕರ ಚಿಕ್ಕಪ್ಪ ಅವರನ್ನು ಸೋಲಿಸಿದ ಕಾರಣಕ್ಕೆ ಜಿಲ್ಲೆಯ ಜನರು ಗುರುತಿಸುವಂತಾಗಿತ್ತು. ಸಧ್ಯ ಬಿಜೆಪಿ ಒಬಿಸಿ ಘಟಕದ ಜಿಲ್ಲಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಜಿಲ್ಲಾ ಕಾನೂನು ಪ್ರಕೋಷ್ಠದ ಸದಸ್ಯ ರವಿಕಾಂತಹೂಗಾರ ಕೂಡ ಟಿಕೆಟ್ ನೀಡುವಂತೆ ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಾನೂನು ಪ್ರಕೊಷ್ಠದ ಸದಸ್ಯರಿಗೆ ಒಂದು ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಒಟ್ಟು ನಾಲ್ಕು ಸ್ಥಾನಗಳನ್ನು ಬಿಜೆಪಿ ಕಾನೂನು ಪ್ರಕೊಷ್ಠದ ಘಟಕಕ್ಕೆ ನೀಡುವಂತೆ ರಾಷ್ಟ್ರೀಯ ಅಧ್ಯಕ್ಷರಿಗೆ ರಾಜ್ಯ ಘಟಕದ ಮುಖಂಡರು ಪತ್ರ ಬರೆದಿದ್ದಾರೆ. ಈ ಪಟ್ಟಿಯಲ್ಲಿ ರವಿಕಾಂತ ಹೂಗಾರ ಅವರ ಹೆಸರು ಕೂಡ ಇದೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಮೂಲಕ ಜನರ ನಡುವೆ ಬಂದಿರುವ ಸಂಜಯ್ ಖೇಣಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಪುತ್ರ ವಿಜಯಸಿಂಗ್ ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿ ಸೋಲು ಅನುಭವಿಸಿದ್ದರು. ಇವರು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಗದಿದ್ದರೂ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ಸಿದ್ಧರಾಗಿದ್ದಾರೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿ ಖೇಣಿ ಪ್ಯಾನಲ್‌ಗೆ ರೈತರು ಬೆಂಬಲ ನೀಡಿದ್ದರು. ಕಾರ್ಖಾನೆಯಲ್ಲಿ ರಾಜಕೀಯ ಬೆಳವಣಿಗೆಗಳು ನಡೆದಿದ್ದರಿಂದ ಕಾರ್ಖಾನೆ ಬಂದ್ ಆಗುವ ಸ್ಥಿತಿಗೆ ಬಂತು ಎಂಬುದು
ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರ ಮಾತು. ಶಿಸ್ತಿನ ಪಕ್ಷವೆಂದು ಗುರುತಿಸಿಕೊಂಡ ಬಿಜೆಪಿ ಮುಖಂಡರ ಮಧ್ಯೆ ಗುಂಪುಗಾರಿಕೆಗಳು ಬಹಿರಂಗವಾಗಿ ಕಂಡುಬರುತ್ತಿವೆ.
ಇದರಿಂದ ಪಕ್ಷದ ಕಾರ್ಯಕರ್ತರು ಸಂಕಷ್ಟ ಎದುರಿಸುವಂತಾಗಿದೆ. ಆಯಾ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಪಕ್ಷದ ಕೆಲಸದಲ್ಲಿ ತೊಡಗಿದ್ದಾರೆ. ಹೊಸ ಮುಖಗಳಿಗೆ ಅವಕಾಶಗಳು ಸಿಗಬೇಕು ಎಂಬುದು ಕೆಲ ಕಾರ್ಯಕರ್ತರ ಬೇಡಿಕೆಯಾಗಿದೆ. ಬರುವ ದಿನಗಳಲ್ಲಿ ಪಕ್ಷದ ಟಿಕೆಟ್ ಯಾರಿಗೆ ಸಿಗುತ್ತದೆ ಎಂದು ಎಲ್ಲಾ ಮುಖಂಡರು ಕಾತುರದಿಂದ ಎದುರು ನೋಡುವಂತಾಗಿದೆ. ವಿಶೇಷ ವರದಿ