ನವದೆಹಲಿ: ಈ ವರ್ಷ ಭಾರತದಲ್ಲಿ ರಾಷ್ಟ್ರಪತಿ-ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಈ ಚುನಾವಣೆಯನ್ನು ಗೆದ್ದೇ ತೀರುವ ವಿಶ್ವಾಸವಿದೆ.
ಈ ನಡುವೆ ಗುರುವಾರ ಸಂಜೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಕೇಂದ್ರ ಶಿಕ್ಷಣ ಧರ್ಮೇಂದ್ರ ಪ್ರಧಾನ್ ಭೇಟಿಯಾಗಿದ್ದಾರೆ.
ಬಿಜೆಪಿ-ಜೆಡಿಯು ನಡುವೆ ಭಿನ್ನಮತ ಜೋರಾಗಿದೆ ಎಂಬ ವದಂತಿಗಳ ನಡುವೆಯೇ ಈ ಭೇಟಿ ಸಂಭವಿಸಿದೆ.
ಇದೇ ವೇಳೆ ನಿತೀಶ್‌ರನ್ನು ಕೇಂದ್ರಕ್ಕೆ ತರಲು ಬಿಜೆಪಿ ಚಿಂತಿಸುತ್ತಿದೆ ಎಂಬ ವರದಿಗಳಿವೆ. ಉಪರಾಷ್ಟ್ರಪತಿ ಹುದ್ದೆಗೂ ಅವರ ಹೆಸರು ಕೇಳಿಬರುತ್ತಿದೆ. ಇಂತಹ ಹೊತ್ತಿನಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಕೇಳಿಕೊಳ್ಳಲು ಪ್ರಧಾನ್ ಈ ಭೇಟಿ ನೀಡಿದ್ದಾರೆ ಎಂದು ಅರ್ಥೈಸಲಾಗಿದೆ.
ಸದ್ಯ ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್ ಸ್ಥಾನಕ್ಕೆ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಪ್ರಶ್ನೆ. ನಿತೀಶ್ ಕುಮಾರ್ ಈ ಹಿಂದೆ ಎರಡು ಬಾರಿ ಎದುರಾಳಿ ಬಣದ ಅಭ್ಯರ್ಥಿಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದ್ದರು!