Advertisement

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

03:08 PM Jan 05, 2025 | Team Udayavani |

ಮುಂಬಯಿ: ಅಕ್ಷಯ್‌ ಕುಮಾರ್‌ ( Akshay Kumar) ಅಭಿನಯದ ಬಾಲಿವುಡ್‌ನ ಬಹುನಿರೀಕ್ಷಿತ ʼಸ್ಕೈ ಫೋರ್ಸ್‌ʼ (Sky Force)  ಚಿತ್ರದ ಟ್ರೇಲರ್‌ ರಿಲೀಸ್ ಆಗಿದೆ.

Advertisement

ಭಾರತದ ಮೊದಲ ವೈಮಾನಿಕ ದಾಳಿಯ ಕಥೆಯನ್ನು ʼಸ್ಕೈ ಫೋರ್ಸ್‌ʼ ಹೇಳಲಿದೆ. ಶತ್ರು ದೇಶ ಪಾಕಿಸ್ತಾನದ ಮೇಲೆ ಏರ್‌ ಸ್ಟ್ರೈಕ್‌ ಮಾಡುವ ದೃಶ್ಯವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಅಂದಿನ ಪಾಕ್‌ ಅಧ್ಯಕ್ಷ ಮಹಮದ್‌ ಆಯೂಬ್‌ ಖಾನ್ ರೇಡಿಯೋ ಪಾಕಿಸ್ತಾನದಲ್ಲಿ ಭಾರತಕ್ಕೆ ಸವಾಲು ಎಸೆಯುವ ಧ್ವನಿಯನ್ನು ಕೇಳಿಸಲಾಗಿದೆ. ಯುದ್ಧದ ಬಗ್ಗೆ ಅಂದು ಅಯೂಬ್‌ ಖಾನ್‌ ಮಾತನಾಡಿರುವುದನ್ನು ತೋರಿಸುವ ಮೂಲಕ ಟ್ರೇಲರ್‌ ಝಲಕ್‌ ಆರಂಭವಾಗಿದೆ.

ನಮ್ಮ ಪಕ್ಕದ ದೇಶದವರಿಗೆ ನಾವು ಕೂಡ ನುಗ್ಗಿ ಹೊಡೆಯಬಹುದೆಂದು ಹೇಳಬಹುದು. ಇಲ್ಲ ನಾವು ಇದನ್ನು ಮಾಡಲು ಆಗುವುದಿಲ್ಲ ನಮ್ಮದು ಶಾಂತ ಬಯಸುವ ದೇಶವೆಂದು ಸೇನೆಯ ಅಧಿಕಾರಿಯೊಬ್ಬರು ಹೇಳಿರುವುದನ್ನು ತೋರಿಸಲಾಗಿದೆ. ಇದಕ್ಕೆ ನಮ್ಮ ಯೋಚನೆ ಬದಲಾಗಬೇಕು ಎಂದು ಹೇಳಿ ಯುದ್ಧಕ್ಕೆ ಅಣಿಯಾಗುವ ಸನ್ನಿವೇಶವನ್ನು ತೋರಿಸಲಾಗಿದೆ.

Advertisement

ಪಾಕಿಸ್ತಾನದ ಭಾರತೀಯ ಸೇನೆ ವೈಮಾನಿಕ ದಾಳಿಯನ್ನು ಮಾಡುವ ದೃಶ್ಯವನ್ನು ತೋರಿಸುವುದರ ಜತೆಗೆ ದೇಶ ಭಕ್ತಿಯನ್ನು ಉಕ್ಕಿಸುವ ಡೈಲಾಗ್ಸ್‌ಗಳು ಗಮನ ಸೆಳೆಯುತ್ತದೆ.

ಟಿ.ಕೆ. ವಿಜಯನ್‌ (ಟ್ಯಾಬಿ) ಎಂಬ ಏರ್‌ ಫೋರ್ಸ್‌ ಟೀಮ್‌ ಮೆಂಬರ್‌ ಏರ್‌ ಸ್ಟ್ರೈಕ್‌ ವೇಳೆ ನಾಪತ್ತೆಯಾಗಿದ್ದು, ಆತನ ಹುಡುಕಾಟದ ಸುತ್ತವೂ ಕಥೆ ಸಾಗಲಿದೆ ಎನ್ನುವುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಅಕ್ಷಯ್‌ ಕುಮಾರ್‌ ಅವರ ಜತೆಗೆ ನವನಟ ವೀರ್ ಪಹಾರಿಯಾ ಅವರು ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಅವರು ಕೂಡ ಪಾತ್ರವರ್ಗದಲ್ಲಿದ್ದಾರೆ.

ಸಂದೀಪ್ ಕೆಲ್ವಾನಿ ಮತ್ತು ಅಭಿಷೇಕ್ ಕಪೂರ್ ನಿರ್ದೇಶನ ಮಾಡಲಿದ್ದು, ದಿನೇಶ್ ವಿಜನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಲಿದ್ದಾರೆ.

ಜನವರಿ 24ಕ್ಕೆ ಚಿತ್ರ ರಿಲೀಸ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next