Advertisement

ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ

07:03 AM Feb 15, 2019 | |

ದಾವಣಗೆರೆ: ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ನಿವಾಸದ ಮೇಲೆ ಜೆಡಿಎಸ್‌ನವರ ದಾಳಿ, ಕಲ್ಲು ತೂರಾಟ, ದೌರ್ಜನ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗುರುವಾರ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುವುದಾಗಿ ಹೇಳಿದ್ದರು. ಅದರ ಭಾಗವಾಗಿಯೇ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ನಿವಾಸದ ಮೇಲೆ ಜೆಡಿಎಸ್‌ನವರು ಏಕಾಏಕಿ ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ ಪರಿಣಾಮ ಬಿಜೆಪಿಯ ಓರ್ವ ಕಾರ್ಯಕರ್ತನಿಗೆ ತೀವ್ರ ಗಾಯಗಳಾಗಿವೆ. ಮುಖ್ಯಮಂತ್ರಿಯವರ ಹೇಳಿಕೆಯ ಪ್ರೇರಣೆಯಿಂದಲೇ ನಡೆದಿರುವ ದಾಳಿ, ಹಲ್ಲೆ ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.

ಇಡೀ ರಾಜ್ಯದಲ್ಲಿ ಕಾನೂನು, ಶಾಂತಿ, ಸುವ್ಯವಸ್ಥೆ, ಜನರ ಕಾಪಾಡುವ ಗುರುತರ ಹೊಣೆಗಾರಿಕೆ, ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿಯವರೇ
ದಂಗೆ ಏಳುವಂತೆ ಕರೆ ನೀಡುವುದಾಗಿ ಹೇಳಿದ್ದರ ಪರಿಣಾಮವೇ ದಾಳಿ, ಹಲ್ಲೆ ನಡೆದಿದೆ. ಹಾಸನದ ಶಾಸಕ ಪ್ರೀತಂಗೌಡ ನಿವಾಸದ ಮೇಲೆ ಜೆಡಿಎಸ್‌
ಗೂಂಡಾಗಳು ದಾಳಿ, ಕಲ್ಲು ತೂರಾಟ, ದೌರ್ಜನ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೈತಿಕ ಹೊಣೆ ಹೊರುವ ಜೊತೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಪ್ರೀತಂಗೌಡ ಅವರು ವಿಧಾನ ಸಭೆಯಲ್ಲಿ ಇರುವುದನ್ನು ತಿಳಿದೇ ಜೆಡಿಎಸ್‌ನವರು ನಿವಾಸಕ್ಕೆ ನುಗ್ಗಿದ್ದಾರೆ. ಅವರ ತಾಯಿ ಮತ್ತು ಬಿಜೆಪಿ
ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ಸಲುವಾಗಿಯೇ ದಾಳಿ ನಡೆಸಿದ್ದಾರೆ. ಜೆಡಿಎಸ್‌ ಕಾರ್ಯಕರ್ತರ ಅಟ್ಟಹಾಸ ನೋಡಿಯೂ ಪೊಲೀಸರು ಮೂಕ
ಪ್ರೇಕ್ಷಕರಾಗಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಪ್ರಬಲ ಸಾಕ್ಷಿ ಎಂದು ದೂರಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಆಣತಿಯಂತೆ ಎಲ್ಲವೂ ನಡೆದಿದೆ. ಹಾಸನದಲ್ಲಿ ಜೆಡಿಎಸ್‌ನವರೇ ಇಡೀ ಆಡಳಿತವನ್ನು
ನಿಯಂತ್ರಿಸುವರು ಎಂಬುದಕ್ಕೆ ಬಿಜೆಪಿ ಶಾಸಕರ ಮನೆ ಮೇಲಿನ ದಾಳಿಯೇ ಸಾಕ್ಷಿ. ಇಡೀ ಘಟನೆಗೆ ರೇವಣ್ಣ ಅವರೇ ಜವಾಬ್ದಾರರು ಎಂದು ದೂರಿದರು.

Advertisement

ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಚ್‌.ಸಿ. ಜಯಮ್ಮ, ನಗರಪಾಲಿಕೆ ಸದಸ್ಯ ಡಿ.ಎನ್‌. ಕುಮಾರ್‌, ಮಾಜಿ ಉಪ ಮೇಯರ್‌ ಪುಷ್ಪಾ ದುರುಗೇಶ್‌, ಮುಕುಂದಪ್ಪ, ರಾಜನಹಳ್ಳಿ ಶಿವಕುಮಾರ್‌, ಶಂಕರಗೌಡ ಬಿರಾದಾರ್‌, ನಿಟುವಳ್ಳಿ
ಲಕ್ಷ್ಮಣ್‌, ಶಿವನಗೌಡ ಪಾಟೀಲ್‌, ಅಣಬೇರು ಶಿವಪ್ರಕಾಶ್‌, ಗುರು, ಟಿಂಕರ್‌ ಮಂಜಣ್ಣ, ಡಿ.ಎನ್‌. ಕಾಂತರಾಜ್‌, ಭಾಗ್ಯ ಪಿಸಾಳೆ, ದಾಕ್ಷಾಯಣಮ್ಮ
ಅಂದಾನಪ್ಪ, ಸವಿತಾ ರವಿಕುಮಾರ್‌, ದೇವಿರಮ್ಮ, ಶಾಂತಾ ದೊರೈ, ಜಿ.ಎಂ. ರುದ್ರಗೌಡ, ಎಂ. ಟಿಪ್ಪುಸುಲ್ತಾನ್‌, ಸೋಗಿ ಶಾಂತಕುಮಾರ್‌,
ರಾಮಚಂದ್ರನಾಯ್ಕ, ಫಣಿಯಾಪುರ ಲಿಂಗರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next