Advertisement

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

03:57 AM Dec 27, 2024 | Team Udayavani |

ಮಂಡ್ಯ: ಬೆಳಗಾವಿಯಲ್ಲಿ ರಾಜ್ಯ ಸರಕಾರ ಕೋಟ್ಯಂತರ ರೂ. ಖರ್ಚು ಮಾಡಿ ಗಾಂಧೀಜಿಯ ಹೆಸರಿನಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಅಧಿವೇಶನದಲ್ಲಿ ಗಾಂಧೀಜಿಯವರ ಫೋಟೋಗಳಿಗಿಂತ ನಕಲಿ ಗಾಂಧಿಗಳ ಕಟೌಟ್‌ಗಳೇ ಹೆಚ್ಚಾಗಿವೆ ಎಂದು ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರು ಮುಂದಿನ ವರ್ಷದಿಂದ ಗಾಂಧಿ ನಡಿಗೆ ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ರಾಜ್ಯ ಸರಕಾರ ಮಾಡುತ್ತಿರುವ ಅಧಿವೇಶನದಲ್ಲಿ ಗಾಂಧೀಜಿಯವರ ಕಟೌಟ್‌ಗಳು ಹೊರತುಪಡಿಸಿ ಗಾಂಧೀಜಿ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಬಂದವರ ನಕಲಿ ಗಾಂಧಿಗಳ ಜತೆಗೆ ಇವರ ಕಟೌಟ್‌ಗಳೇ ಆಕಾಶದೆತ್ತರಕ್ಕೆ ಹಾಕಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಈಗಿರುವುದು ನಕಲಿ ಕಾಂಗ್ರೆಸ್‌, ಅಸಲಿ ಕಾಂಗ್ರೆಸ್‌ ಅಲ್ಲ. ಹಿಂದೆ ಗಾಂಧೀಜಿಯವರೇ ಕಾಂಗ್ರೆಸ್‌ ವಿಸರ್ಜಿಸಿ ಎಂದು ಹೇಳಿದ್ದರು. ಕಾಂಗ್ರೆಸ್‌ ಹೋಳಾಗಿದೆ. ಒರಿಜಿನಲ್‌ ಕಾಂಗ್ರೆಸ್‌ ಇದೆಯೇ? ಯಾವ ಕಾಂಗ್ರೆಸ್‌ ಇದು. ಈಗಿರುವ ಕಾಂಗ್ರೆಸ್‌ ಆಲಿಬಾಬಾ ಮತ್ತು ನವಲತ್ತು ಮಂದಿ ಎಂಬಂಥ ಕಾಂಗ್ರೆಸ್‌ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next