Advertisement

Bigg Boss Tamil 7: ಬಿಗ್‌ ಬಾಸ್‌ ಟ್ರೋಫಿ ಮುಡಿಗೇರಿಸಿಕೊಂಡ ವೈಲ್ಡ್‌ ಕಾರ್ಡ್‌ ಸ್ಪರ್ಧಿ

12:47 PM Jan 15, 2024 | Team Udayavani |

ಚೆನ್ನೈ: ದಿಗ್ಗಜ ನಟ ಕಮಲ್‌ ಹಾಸನ್‌ ನಡೆಸಿಕೊಡುವ ʼಬಿಗ್ ಬಾಸ್‌ʼ 7ನೇ ಸೀಸನ್‌ ನ ಫಿನಾಲೆ ವಿಜೇತ ಸ್ಪರ್ಧಿಯ ಘೋಷಣೆ ಮೂಲಕ ಭಾನುವಾರ (ಜ.14 ರಂದು) ಮುಕ್ತಾಯ ಕಂಡಿದೆ.

Advertisement

ಬಿಗ್‌ ಬಾಸ್‌ ತಮಿಳಿನ ಇತಿಹಾಸದಲ್ಲೇ ಮೊದಲ ಬಾರಿ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ದೊಡ್ಮನೆಯೊಳಗೆ ಪ್ರವೇಶ ಪಡೆದ ಸ್ಪರ್ಧಿಯೊಬ್ಬರು ಬಿಗ್‌ ಬಾಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಣ್ಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಿಗ್‌ ಬಾಸ್‌ ತಮಳು -7 ಸಮಾಪ್ತಿ ಕಂಡಿದೆ. ಫಿನಾಲೆಯ ವೇದಿಕೆಯಲ್ಲಿ ಒಂದೊಂದೇ ಸ್ಪರ್ಧಿಗಳು ಎಲಿಮಿನೇಟ್‌ ಆಗಿ ಕೊನೆಯದಾಗಿ ಉಳಿದ ಇಬ್ಬರಲ್ಲಿ ವಿಜೇತರನ್ನು ಘೋಷಿಸಲಾಗಿದೆ.

ಕಾರ್ಯಕ್ರಮಕ್ಕೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದ ಕಿರುತೆರೆ ನಟಿ ಅರ್ಚನಾ ರವಿಚಂದ್ರನ್ ಬಿಗ್‌ ಬಾಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಮೊದಲ ಬಾರಿ ಬಿಗ್ ಬಾಸ್‌ ತಮಿಳಿನ ಕಾರ್ಯಕ್ರಮದಲ್ಲಿ ವೈಲ್ಡ್‌ ಕಾರ್ಡ್ ಸ್ಪರ್ಧಿಯೊಬ್ಬರು ಫಿನಾಲೆ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ರನ್ನರ್ ಅಪ್ ಆಗಿ ಡ್ಯಾನ್ಸರ್‌ ಮಾಯಾ ಕೃಷ್ಣ ಹೊರಹೊಮ್ಮಿದ್ದಾರೆ.

ವಿಜೇತೆ ಅರ್ಚನಾ ಅವರಿಗೆ 50 ಲಕ್ಷ ರೂ. ನಗದು, 15 ಲಕ್ಷ ರೂ. ಮೌಲ್ಯದ ನಿವೇಶನ ಹಾಗೂ ಮಾರುತಿ ನೆಕ್ಸಾ ಗ್ರಾಂಡ್ ವಿಟಾರಾ ಕಾರನ್ನು ಪಡೆದುಕೊಂಡಿದ್ದಾರೆ.

Advertisement

ಅರ್ಚನಾ ಅವರೊಂದಿಗೆ ಮಾಯಾ ಕೃಷ್ಣನ್, ಮಣಿಚಂದ್ರ, ವಿಷ್ಣು ಮತ್ತು ದಿನೇಶ್ ಫಿನಾಲೆಯಲ್ಲಿ ಸ್ಪರ್ಧಿಗಳಾಗಿದ್ದರು.

“ನಾನು ಕೇವಲ ಎರಡು ವಾರಗಳವರೆಗೆ ಮಾತ್ರ ಯೋಜಿಸಿದೆ. ಇಷ್ಟು ದಿನ ನಾನು ಪ್ಲಾನ್ ಮಾಡಿರಲಿಲ್ಲ. ಒಂದೊಂದು ದಿನ ಎಂಜಾಯ್ ಮಾಡುತ್ತಿದ್ದೆ. ನನ್ನ ಶಾಲಾ ದಿನಗಳು ಮತ್ತು ಕಾಲೇಜು ದಿನಗಳಿಂದಲೂ ನನ್ನ ಹತ್ತಿರ ಯಾರೂ ಇರಲಿಲ್ಲ. ಆದರೆ ಈ ಶೋ ನಂತರ, ನಾನು ಹಿಂತಿರುಗಿ ನೋಡಿದಾಗ, ನಾನು ತುಂಬಾ ಜನರನ್ನು ನೋಡುತ್ತೇನೆ. ನಾನು ಈ ಬಗ್ಗೆ ಕನಸು ಕಂಡಿರಲಿಲ್ಲ. ನನ್ನ ಕುಟುಂಬ ಮತ್ತು ಕಮಲ್ ಸರ್ ಗೆ ಧನ್ಯವಾದಗಳು. ಈ ಗೆಲುವಿನಲ್ಲಿ ನಿಮ್ಮ ಪಾಲೂ ಇದೆ ಸರ್, ನಾನು ನಿಮ್ಮನ್ನು ಗುರುವಾಗಿ ತೆಗೆದುಕೊಂಡೆ. ಮತ್ತು ಪ್ರತಿ ಕ್ಷಣವೂ ನನ್ನನ್ನು ತಳ್ಳಿದ್ದಕ್ಕಾಗಿ ನನ್ನ ಸಹ ಸ್ಪರ್ಧಿಗಳಿಗೆ. ಎಲ್ಲರಿಗೂ ಧನ್ಯವಾದಗಳು. ನಾನು ಮೂಕನಾಗಿದ್ದೇನೆ.” ಎಂದು ವೇದಿಕೆಯಲ್ಲಿ ಅರ್ಚನಾ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.